ಬೆಂಗಳೂರು : ಬೀದಿ ನಾಯಿಗಳು ಕಚ್ಚಿ 5ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಬೆಂಗಳೂರಿನ ಅಜ್ಜೇಗೌಡನಪಾಳ್ಯದಲ್ಲಿ ನಡೆದಿದೆ. ದುರ್ಗೇಶ್(5) ಮೃತ ಬಾಲಕ ಎನ್ನಲಾಗಿದ್ದು, ಬಾಲಕ ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಮಲ್ಲಪ್ಪ ಎಂಬುವವರ ಮಗ ಎಂದು ತಿಳಿದು ಬಂದಿದ್ದು, ಕೆಲಸಕ್ಕೆಂದು ದಂಪತಿ ಬೆಂಗಳೂರಿಗೆ ಬಂದು ಜೀವನ ಸಾಗಿಸುತ್ತಿದ್ದರು. ಬಾಲಕನ ತಂದೆ ಪಕ್ಕದಲ್ಲೇ ಕೆಲಸ ಮಾಡುತ್ತಿದ್ದರಿಂದ ತಂದೆಯನ್ನು ಮಾತನಾಡಿಸಿ ಅಪ್ಪ ನೀಡಿದ ಹಣವನ್ನು ತೆಗೆದುಕೊಂಡು ಚಾಕಲೇಟ್ ತೆಗೆದುಕೊಳ್ಳಲು ಹೋಗುತ್ತಿದ್ದ ಸಂದರ್ಭದಲ್ಲಿ 8 ನಾಯಿಗಳು ಬಾಲಕನ ಮೇಲೆ ದಾಳಿ ನಡೆಸಿದ್ದು, ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ನಿರ್ಜನ ಪ್ರದೇಶವಾದ್ದರಿಂದ ಸ್ಥಳದಲ್ಲಿ ಯಾರು ಇಲ್ಲದ ಕಾರಣ ಬಾಲಕನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.










