ಕಾರಿನಲ್ಲಿದ್ದ ಸ್ಯಾನಿಟೈಸರ್ ಗೆ ಬೆಂಕಿ ತಗುಲಿ ಎನ್.ಸಿ.ಪಿ. ಮುಖಂಡ ಸಜೀವ ದಹನ…

201
firstsuddi

ಮುಂಬೈ : ಕಾರಿನಲ್ಲಿದ್ದ ಸ್ಯಾನಿಟೈಸರ್ ಬಾಟಲ್‍ಗೆ ಬೆಂಕಿ ತಗುಲಿ ಎನ್.ಸಿ.ಪಿ ಪಕ್ಷದ ಮುಖಂಡ ಕಾರಿನಲ್ಲೇ ಸಜೀವ ದಹನವಾಗಿರುವ ಘಟನೆ ಮಹಾರಾಷ್ಟ್ರದ ಪಿಂಪಲ್‍ಗಾವ್ ಬಳಿ ನಡೆದಿದೆ. ಮೃತ ಮುಖಂಡನನ್ನು ಸಂಜಯ್ ಶಿಂಧೆ ಎಂದು ಗುರುತಿಸಲಾಗಿದೆ. ಮುಖಂಡ ಸಂಜಯ್ ಶಿಂಧೆ ಅವರು ನಾಸಿಕ್‍ನಲ್ಲಿ ಇರುವ ತಮ್ಮ ದ್ರಾಕ್ಷಿ ತೋಟಕ್ಕೆ ಕೀಟನಾಶಕ ಕೊಳ್ಳಲು ಪಿಂಪಲ್‍ಗಾವ್‍ಗೆ ತೆರಳುತ್ತಿದ್ದ ವೇಳೆ ಕಡ್ವಾ ನದಿ ಬಳಿ ವಾಹನದಲ್ಲಿ ತಾಂತ್ರಿಕ ದೋಷ ಉಂಟಾಗಿ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಕಾರಿನಲ್ಲಿದ್ದ ಹ್ಯಾಂಡ್ ಸ್ಯಾನಿಟೈಸರ್ ಬಾಟಲ್ ಗೆ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಸಂಜಯ್ ಶಿಂಧೆ ಅವರು ಕಾರಿನ ಬಾಗಿಲು ತೆರೆಯಲಾಗದೆ ಕಾರಿನ ಗಾಜು ಹೊಡೆದು ಹೊರಗೆ ಬರಲೂ ಯತ್ನಿಸಿದರೂ ಬೆಂಕಿಯಿಂದ ಕಾರು ಲಾಕ್ ಆಗಿ ಹೊರ ಬರಲಾಗದೆ ಸಜೀವ ದಹನವಾಗಿದ್ದಾರೆ.