ಕಾಶ್ಮೀರ ಪ್ರವೇಶಿಸಿದ ಭಾರತ್ ಜೋಡೋ ; ಮೊದಲ ಬಾರಿಗೆ ಜಾಕೆಟ್‌ನಲ್ಲಿ ಕಾಣಿಸಿಕೊಂಡ ರಾಹುಲ್ ಗಾಂಧಿ.

55
firstsuddi

ಶ್ರೀನಗರ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ನಿನ್ನೆ ಪಂಜಾಬ್ ನಿಂದ ಜಮ್ಮುವಿಗೆ ತಲುಪಿದೆ. ಚಳಿಗಾಲದಲ್ಲಿ ದಕ್ಷಿಣದ ರಾಜ್ಯಗಳಿಂದ ಹಿಡಿದು ಉತ್ತರದ ರಾಜ್ಯಗಳವರೆಗೆ ಕೇವಲ ಟೀಶರ್ಟ್ ನಲ್ಲಿ ಕಾಣಿಸಿಕೊಂಡಿದ್ದ ರಾಹುಲ್ ಗಾಂಧಿ, ಇಂದು ಮೊದಲ ಬಾರಿಗೆ ಜಾಕೆಟ್ ನಲ್ಲಿ ಕಾಣಿಸಿಕೊಂಡರು.

ಜಮ್ಮುವಿನ ಹಲವಾರು ಭಾಗಗಳಲ್ಲಿ ಬೆಳಗ್ಗೆಯಿಂದ ತುಂತುರು ಮಳೆಯಾಗಿದ್ದರಿಂದ ರಾಹುಲ್ ಗಾಂಧಿ ರೈನ್ ಕೋಟ್ ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ನಂತರ ಅವರು ಜಾಕೆಟ್ ತೆಗೆದು, ಬಿಳಿ ಟೀಶರ್ಟ್ ತೊಟ್ಟು ನಡೆಯುತ್ತಿರುವುದು ಕಂಡು ಬಂತು.

ರಾಹುಲ್ ಇದುವರೆಗೆ ತಮ್ಮ 125 ದಿನಗಳ ಯಾತ್ರೆಯಲ್ಲಿ ಸುಮಾರು 3,400 ಕಿ.ಮೀ ಕ್ರಮಿಸಿದ್ದಾರೆ. ಆದರೆ ಅವರು ಇಲ್ಲಿಯವರೆಗೂ ಯಾವುದೇ ಆಡಂಬರವಿಲ್ಲದ ಬಿಳಿಯ ಟೀಶರ್ಟ್ ನಲ್ಲಿ ಕಂಗೊಳಿಸುತ್ತಿದ್ದರು.

ರಾಹುಲ್ ಗಾಂಧಿ ಜನವರಿ 25 ರಂದು ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯ ಬನಿಹಾಲ್ ನಲ್ಲಿ ರಾಷ್ಟ್ರಧ್ವಜಾರೋಹಣ ಮಾಡಲಿದ್ದಾರೆ. ಜನವರಿ 27 ರಂದು ಅನಂತನಾಗ್ ಮೂಲಕ ಶ್ರೀನಗರವನ್ನು ಪ್ರವೇಶಿಸಲು ನಿರ್ಧರಿಸಲಾಗಿದೆ.