ಕಿಚ್ಚನ ಹುಟ್ಟುಹಬ್ಬದಂದು ರಿಲೀಸ್ ಆಯ್ತು ವಿಕ್ರಾಂತ್ ರೋಣ ಸಿನಿಮಾದ ‘ಡೆಡ್ ಮ್ಯಾನ್ ಆಂಥೆಮ್’ ಟೀಸರ್…

66
firstsuddi

ಬೆಂಗಳೂರು : ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ ಇಂದು 50ನೇ ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನದಂದು ವಿಕ್ರಾಂತ್ ರೋಣ ಚಿತ್ರತಂಡ ಸ್ಪೆಷಲ್ ಗಿಫ್ಟ್ ನೀಡಿದೆ. ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ‘ಡೆಡ್ ಮ್ಯಾನ್ ಆಂಥೆಮ್’ ಟೀಸರ್ ಬಿಡುಗಡೆ ಮಾಡುವ ಮೂಲಕ ಕಿಚ್ಚನ ಅಭಿಮಾನಿಗೆ ಚಿತ್ರತಂಡ ಸಿಹಿ ಸುದ್ದಿ ನೀಡಿದೆ.

ಡೈರೆಕ್ಟರ್ ಅನೂಪ್ ಭಂಡಾರಿ ಆ್ಯಕ್ಷನ್ ಕಟ್ ಹೇಳಿದ್ದು, ಈ ಚಿತ್ರದಲ್ಲಿ ಸುದೀಪ್ ಸಖತ್ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ಬಹು ಕೋಟಿ ವೆಚ್ಚದಲ್ಲಿ ತಯಾರಾಗಿರುವ ವಿಕ್ರಾಂತ್ ರೋಣ ಸಿನಿಮಾ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಒಟ್ಟಾರೆ ವಿಕ್ರಾಂತ್ ರೋಣ ಟೀಸರ್ ಸಖತ್ ರಿಚ್ ಆಗಿ ಮೂಡಿಬಂದಿದ್ದು, ಸಿನಿಮಾ ಹೇಗಿರಲಿದೆ ಎಂದು ಮುಂದೆ ಕಾದು ನೋಡಬೇಕಿದೆ.