ಕಿರಾತಕ ಚಿತ್ರದ ನಿರ್ದೇಶಕ ಪ್ರದೀಪ್ ರಾಜ್ ಕೊರೊನಾದಿಂದ ನಿಧನ…

88
firstsuddi

ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕಿರಾತಕ’ ಚಿತ್ರದ ನಿರ್ದೇಶಕ ಪ್ರದೀಪ್ ರಾಜ್(46) ಇಂದು ನಿಧನರಾಗಿದ್ದಾರೆ.

ಡಯಾಬಿಟಿಸ್ ನಿಂದ ಹಲವು ವರ್ಷಗಳಿಂದ ಬಳಲುತ್ತಿದ್ದ ಪ್ರದೀಪ್ ರಾಜ್ ಗೆ ಕೊರೊನಾ ಸೋಂಕು ತಗುಲಿತ್ತು. ಇದೀಗ ಅವರು ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ. ಪ್ರದೀಪ್ ರಾಜ್ ಇಂದು ಬೆಳಗ್ಗೆ ಪಾಂಡಿಚೇರಿಯಲ್ಲಿ ಇಹಲೋಕ ತ್ಯಜಿಸಿರುವುದಾಗಿ ಅವರ ಸಹೋದರ ಪ್ರಶಾಂತ್ ತಿಳಿಸಿದ್ದಾರೆ.

ಇವರು ಕಿರಾತಕ ಚಿತ್ರ ಅಲ್ಲದೇ ಬೆಂಗಳೂರು 560023, ಕಿಚ್ಚು, ಮಿಸ್ಟರ್ 420, ನೀನಾಸಂ ಸತೀಶ್ ನಟನೆಯ ಅಂಜದ ಗಂಡು, ದುನಿಯಾ ವಿಜಯ್ ನಟನೆಯ ರಜನಿಕಾಂತ ಸೇರಿದಂತೆ ಹಲವು ಸಿನಿಮಾಗಳನ್ನ ನಿರ್ದೇಶನ ಮಾಡಿದ್ದಾರೆ. ಪ್ರದೀಪ್ ರಾಜ್ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನ ಅಗಲಿದ್ದಾರೆ. ಪಾಂಡಿಚೆರಿಯಲ್ಲಿ ಇಂದು ಮಧ್ಯಾಹ್ನ ಮೃತರ ಅಂತ್ಯಕ್ರಿಯೆ ನೆರವೇರಿಸೋಕೆ ಕುಟುಂಬ ತೀರ್ಮಾನಿಸಿದೆ.