ಕಿಲ್ಲರ್ ಕೊರೊನಾಗೆ ಭಾರತದಲ್ಲಿ ಮತ್ತೊಂದು ಬಲಿ-ಸಾವಿನ ಸಂಖ್ಯೆ 9ಕ್ಕೆ ಏರಿಕೆ…

155
firstsuddi

ಕೊಲ್ಕಾತ್ತಾ : ಮಹಾಮಾರಿ ಕೊರೊನಾ ವೈರಸ್‍ಗೆ ಕೊಲ್ಕಾತ್ತಾದ ಡಂ ಡಂನಲ್ಲಿ ಮತ್ತೋರ್ವ ವ್ಯಕ್ತಿ ಬಲಿಯಾಗಿದ್ದು, ಈ ಮೂಲಕ 9ಮಂದಿ ಕೊರೊನಾ ವೈರಸ್‍ಗೆ ಬಲಿಯಾಗಿದ್ದಾರೆ. 55 ವರ್ಷದ ಮೃತ ವ್ಯಕ್ತಿಯ ಮಗ ಕಳೆದ ಒಂದು ವಾರದ ಹಿಂದೆ ಇಟಲಿಯಿಂದ ವಾಪಸ್ಸಾಗಿದ್ದು, ಬಳಿಕ ತಪಾಸಣೆ ನಡೆಸಿದಾಗ ಮಗನಿಗೆ ಕೊರೊನಾ ವೈರಸ್ ತಗುಲಿರುವುದಾಗಿ ದೃಢಪಟ್ಟಿತ್ತು. ಮೃತ ವ್ಯಕ್ತಿಗೆ ತನ್ನ ಮಗನಿಂದಲೇ ಕೊರೊನಾ ಸೋಂಕು ತಗುಲಿದ್ದು, ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊಲ್ಕಾತ್ತಾದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.