ಕುರಿಗಳಿಗೂ ಫುಲ್ ಟಿಕೆಟ್ ನೀಡಿದ ಕಂಡಕ್ಟರ್.

82
firstsuddi

ಯಾದಗಿರಿ : ಕೆಸ್​ಆರ್​ಟಿಸಿ ಬಸ್‌ನಲ್ಲಿ ಪ್ರಯಾಣಿಕರಂತೆ ಕುರಿಗಳು ಸಹ ಟಿಕೆಟ್ ಪಡೆದು ಪ್ರಯಾಣ ಬೆಳೆಸಿರುವ ಅಪರೂಪದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ರೈತರಾದ ಸುನೀಲ್ ಮತ್ತು ರಾಮಲಿಂಗಪ್ಪ ಎಂಬುವವರು ನಿನ್ನೆ ಸಂತೆಗೆ ಬಂದು ಎರಡು ಕುರಿಗಳನ್ನು ಖರೀದಿ ಮಾಡಿದ್ದಾರೆ. ಇನ್ನು ಕುರಿಗಳನ್ನು ತಮ್ಮ ಜೊತೆಗೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕೊಡ್ಲಾ ಗ್ರಾಮಕ್ಕೆ ಬಸ್ ನಲ್ಲಿ ಕರೆದುಕೊಂಡು ಹೋಗಲು ಮುಂದಾಗಿದ್ದರು. ಈ ವೇಳೆ ಕಂಡಕ್ಟರ್ ಎರಡು ಮೇಕೆ ಮರಿಗಳಿಗೆ ಫುಲ್ ಟಿಕೆಟ್ ನೀಡಿದ್ದಾರೆ.

ಕಂಡಕ್ಟರ್ ಬಳಿ ಮೇಕೆ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿರು. ಆದರೆ ಇದಕ್ಕೆ ಕಂಡಕ್ಟರ್ ಒಪ್ಪದೆ ಇದ್ದಾಗ ಬೇರೆ ವಿಧಿ ಇಲ್ಲದೆ ಇಬ್ಬರೂ ರೈತರು ತಮ್ಮ ಮೇಕೆಗಳಿಗೆ ಫುಲ್ ಟಿಕೆಟ್ ದರ ನೀಡಿ ತಮ್ಮ ಜೊತೆಗೆ ಕರೆದುಕೊಂಡು ಹೋಗಬೇಕಾಯಿತು.