ಪೌರ ಕಾರ್ಮಿಕರ ಮೇಲೆ ಹಲ್ಲೆ – ಪೊಲೀಸರು ಏನು ದನ ಕಾಯುತ್ತಿದ್ದಾರಾ ಎಂದು ಎಸ್‍ಪಿಗೆ ಈಶ್ವರಪ್ಪ ಪ್ರಶ್ನೆ…

77
firstsuddi

ಶಿವಮೊಗ್ಗ : ನಗರದ ಜೆ.ಪಿ.ನಗರದಲ್ಲಿ ಕಳೆದ ಮೂರು ದಿನದ ಹಿಂದೆ ಕಸ ಸಂಗ್ರಹಿಸಲು ತೆರಳಿದ್ದ ಪೌರ ಕಾರ್ಮಿಕರ ಮೇಲೆ ಐದಾರು ಮಂದಿ ಹಲ್ಲೆ ನಡೆಸಿದ್ದರು. ಘಟನೆಯಿಂದಾಗಿ ಇಬ್ಬರು ಪೌರ ಕಾರ್ಮಿಕರು ಗಾಯಗೊಂಡು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೌರ ಕಾರ್ಮಿಕರ ಆರೋಗ್ಯ ವಿಚಾರಿಸಲು ಸಚಿವ ಈಶ್ವರಪ್ಪ ಆಸ್ಪತ್ರೆಗೆ ತೆರಳಿದ್ದರು.

ಈ ವೇಳೆ ಘಟನೆ ಬಗ್ಗೆ ಮಾಹಿತಿ ಪಡೆಯಲು ಆಸ್ಪತ್ರೆಯಿಂದಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿಪ್ರಸಾದ್ ಅವರಿಗೆ ಕರೆ ಮಾಡಿದ ಅವರು, ತುಂಗಾನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದು ಮೂರು ದಿನವಾಗಿದೆ. ಐದಾರು ಮಂದಿ ವಿರುದ್ಧ ದೂರು ದಾಖಲಾಗಿದೆ. ಆದರೆ ಆ ಠಾಣೆ ಪೊಲೀಸರು ಇಬ್ಬರನ್ನು ಮಾತ್ರ ವಶಕ್ಕೆ ಪಡೆದಿದ್ದಾರೆ. ಪೊಲೀಸರು ಏನು ದನ ಕಾಯುತ್ತಿದ್ದಾರಾ ಎಂದು ಪ್ರಶ್ನಿಸಿದರು. ನಾನು ಸಂಜೆ ನಿಮ್ಮ ಕಚೇರಿಗೆ ಭೇಟಿ ನೀಡುತ್ತೇನೆ. ಅಷ್ಟರೊಳಗೆ ಉಳಿದ ಆರೋಪಿಗಳ ಬಂಧನ ಆಗಬೇಕು ಎಂದು ಖಡಕ್ ಸೂಚನೆ ನೀಡಿದ್ದಾರೆ.