ಶಕ್ತಿಧಾಮ ಮಕ್ಕಳ ನೋಡಿಕೊಳ್ಳುವ ಬಗ್ಗೆ ಪುನೀತ್ ಪತ್ನಿ ಅಶ್ವಿನಿ ಬಳಿ ಅನುಮತಿ ಕೇಳಿದ ನಟ ವಿಶಾಲ್.

101
firstsuddi

ಬೆಂಗಳೂರು : ಪುನೀತ್ ರಾಜ್​ಕುಮಾರ್ ಅವರು ನೋಡಿಕೊಳ್ಳುತ್ತಿದ್ದ ಶಕ್ತಿಧಾಮ ಮಕ್ಕಳ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಕಾಲಿವುಡ್ ನಟ ವಿಶಾಲ್ ಮುಂದೆ ಬಂದಿದ್ದಾರೆ. ಈ ಸಲುವಾಗಿ ಇಂದು ಪುನೀತ್ ರಾಜ್ಕುಮಾರ್ ಮನೆಗೆ ಆಗಮಿಸಿದ ವಿಶಾಲ್, ಪುನೀತ್ ಪತ್ನಿ ಅಶ್ವಿನಿ ಬಳಿ ಈ ಬಗ್ಗೆ ಚರ್ಚೆ ನಡೆಸಿದ್ದು, ಶಿವರಾಜ್ ಕುಮಾರ್ ಜತೆಗೂ ವಿಶಾಲ್ ಮಾತನಾಡಿದ್ದಾರೆ.

ಪುನೀತ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾಲಿವುಡ್ ನಟ ವಿಶಾಲ್ ಇಂದು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿ ಭಾವುಕರಾದರು. ಈ ವೇಳೆ ಮಾತನಾಡಿದ ಅವರು ಪುನೀತ್ ರಾಜ್ಕುಮಾರ್ ಇಲ್ಲ ಎಂದುಕೊಳ್ಳಲು ಸಾಧ್ಯವಿಲ್ಲ. ಅವರ ನಿಧನ ಇಡೀ ಸಮಾಜಕ್ಕೆ ಮತ್ತು ಚಿತ್ರರಂಗಕ್ಕೆ ದೊಡ್ಡ ನಷ್ಟ ಉಂಟು ಮಾಡಿದೆ. ಈಗತಾನೇ ಪುನೀತ್ ಅವರ ಮನೆಗೆ ಹೋಗಿ ಬಂದಿದ್ದೇನೆ. 1800 ವಿದ್ಯಾರ್ಥಿಗಳನ್ನು ನೋಡಿಕೊಳ್ಳೋಕೆ ಅಶ್ವಿನಿ ಮೇಡಂ ಬಳಿ ಅನುಮತಿ ಕೇಳಿದ್ದೇನೆ. ಇನ್ನು ಮೂರು-ನಾಲ್ಕು ತಿಂಗಳಲ್ಲಿ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ ಎಂದು ವಿಶಾಲ್ ಹೇಳಿದ್ದಾರೆ.