ಮತ್ತೊಂದು ಕೆನ್ನೆ ತೋರಿಸಿದರೆ ಸಿಗುವುದು ಸ್ವಾತಂತ್ರ್ಯವಲ್ಲ, ಭಿಕ್ಷೆ – ಕಂಗನಾ ರಣಾವತ್.

82
firstsuddi

ಮುಂಬೈ : ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಒಂದಿಲ್ಲೊಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಇತ್ತೀಚೆಗಷ್ಟೇ ಭಾರತಕ್ಕೆ 1947ರಲ್ಲಿ ಸಿಕ್ಕಿದ್ದು ಭಿಕ್ಷೆ, 2014ರಲ್ಲಿ ಸಿಕ್ಕಿದ್ದು ನಿಜವಾದ ಸ್ವಾತಂತ್ರ್ಯ ಎಂದು ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದರು. ಇದೀಗ ಮತ್ತೊಮ್ಮೆ ಮಹಾತ್ಮ ಗಾಂಧೀಜಿ ಅವರ ಅಹಿಂಸಾ ಮಾರ್ಗದ ವಿಚಾರವಾಗಿ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದಾರೆ.

ಇನ್ಸ್ಟಾಗ್ರಾಂನಲ್ಲಿ 1940ರ ಸುದ್ದಿ ಪತ್ರಿಕೆಯ ತುಣುಕನ್ನು ಪೋಸ್ಟ್ ಮಾಡಿರುವ ಅವರು ‘ನೀವು ಗಾಂಧಿ ಅಭಿಮಾನಿ ಅಥವಾ ನೇತಾಜಿ ಅವರ ಬೆಂಬಲಿಗರಾಗಿರಬಹುದು. ಆದರೆ, ಅವರಿಬ್ಬರೂ ಆಗಿರಲು ಸಾಧ್ಯವಿಲ್ಲ. ನೀವೇ ಆಯ್ಕೆ ಮಾಡಿಕೊಂಡು ನಿರ್ಧರಿಸಿ.
ಹೋರಾಡಿ ಸ್ವಾತಂತ್ರ್ಯ ಪಡೆಯುವ ಧೈರ್ಯವಿಲ್ಲದವರಿಗೆ ಹಾಗೂ ಅಧಿಕಾರ ದಾಹ ಮತ್ತು ಕುತಂತ್ರಿಗಳಿಗೆ ಬ್ರಿಟೀಷರಿಗೆ ಸ್ವಾತಂತ್ರವನ್ನು ಹಸ್ತಾಂತರ ಮಾಡಿದ್ದಾರೆ. ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ತೋರಿಸು ಎಂದು ಗಾಂಧಿ ಮಾರ್ಗ ಅನುಸರಿಸಿದರೆ ಸಿಗುವುದು ಸ್ವಾತಂತ್ರ್ಯವಲ್ಲ, ಭಿಕ್ಷೆ. ಗಾಂಧೀಜಿ ಅವರು ಭಗತ್ ಸಿಂಗ್ ಅಥವಾ ಸುಭಾಷ್ ಚಂದ್ರ ಬೋಸ್ ಅವರಿಗೆ ಬೆಂಬಲ ನೀಡಲಿಲ್ಲ. ಎಂದು ಕಂಗನಾ ಬರೆದುಕೊಂಡಿದ್ದಾರೆ.