ಕುಸಿತ ವಲಯದಲ್ಲಿ ಜೋಶಿಮಠ : ಸಂತ್ರಸ್ತ ಕುಟುಂಬಗಳಿಗೆ 1.5 ಲಕ್ಷ ರೂ. ಪರಿಹಾರ ಘೋಷಣೆ…

52
firstsuddi

ಡೆಹ್ರಾಡೂನ್ : ಜೋಶಿಮಠದಲ್ಲಿ ಭೂಕುಸಿತದಿಂದ ಮನೆಗಳನ್ನು ಕಳೆದುಕೊಂಡಿರುವ ಸಂತ್ರಸ್ತ ಕುಟುಂಬಗಳಿಗೆ ಉತ್ತರಾಖಂಡ ಸರ್ಕಾರ ತಲಾ 1.5 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದೆ.

ಜೋಶಿಮಠದಲ್ಲಿನ ರಸ್ತೆ, ಮನೆಗಳು ಸೇರಿದಂತೆ ಅನೇಕ ಕಡೆ ಬಿರುಕುಗಳು ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ಅಲ್ಲಿ ವಾಸಿಸಲು ಅಪಾಯಕಾರಿ ಎಂದು ಗುರುತಿಸಲಾಗಿರುವ 600ಕ್ಕೂ ಹೆಚ್ಚು ಕಟ್ಟಡಗಳನ್ನು ನೆಲಸಮಗೊಳಿಸಲು ಸರ್ಕಾರ ನಿನ್ನೆ ಮುಂದಾಗಿತ್ತು. ಆದರೆ ಸ್ಥಳಿಯರು ಈ ನಡೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ನೆಲಸಮ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ.

ಸದ್ಯಕ್ಕೆ ನಗರದ ಮಲಾರಿ ಇನ್ ಹಾಗೂ ಮೌಂಟ್ ವ್ಯೂ ಹೆಸರಿನ 2 ಹೋಟೆಲ್ ಗಳನ್ನು ಮಾತ್ರವೇ ನೆಲಸಮ ಮಾಡಲಾಗುತ್ತಿರುವುದಾಗಿ ವರದಿಯಾಗಿದೆ. ಜೋಶಿಮಠ ಮುಳುಗಡೆಯ ಹಿನ್ನೆಲೆ ಅಲ್ಲಿನ ಸಾವಿರಾರು ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳಿಸಲಾಗುತ್ತಿದೆ.