ಕೆಟ್ಟದಾಗಿ ಮಾತನಾಡುವುದೇ ಈಶ್ವರಪ್ಪ ಅವರ ಸಂಸ್ಕೃತಿ: ಡಿ.ಕೆ ಶಿವಕುಮಾರ್

269
firstsuddi

ಹುಬ್ಬಳ್ಳಿ : ಸಚಿವ ಡಿ.ಕೆ ಶಿವಕುಮಾರ್ ಅವರು ತಮ್ಮ 58ನೇ ಹುಟ್ಟುಹಬ್ಬದ ಆಚರಣೆಯನ್ನು ಖಾಸಗಿ ಹೋಟೆಲ್‍ನಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಆಚರಣೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್‍ನವರು ನರ ಸತ್ತವರು ಎಂಬ ಕೆ.ಎಸ್ ಈಶ್ವರಪ್ಪ ಅವರ ಹೇಳಿಕೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ್ದಾರೆ. ನರ ಇದೆಯೋ ಸತ್ತಿದೆಯೋ ಎಂದು ಈಶ್ವರಪ್ಪ ಅವರು ಪರೀಕ್ಷೆ ಮಾಡುವುದಾದರೆ ಮಾಡಲಿ. ನರ ಹಾಗೂ ಗಂಡಸ್ತನದ ಬಗ್ಗೆ ಪರೀಕ್ಷೆ ಮಾಡಲಿ. ಆಗಾ ಯಾರೂ ನರಸತ್ತವರು ಎಂದು ತಿಳಿಯುತ್ತದೆ. ಕೆಟ್ಟದಾಗಿ ಮಾತನಾಡುವುದೇ ಈಶ್ವರಪ್ಪ ಅವರ ಸಂಸ್ಕೃತಿ ಎಂದು ತಿರುಗೇಟು ನೀಡಿದ್ದಾರೆ