ಕೇಂದ್ರ ಸರ್ಕಾರದ ನಿರ್ಧಾರದಿಂದ ಕಾಲಿಗೆ ಹೊಕ್ಕಿದ್ದ ಮುಳ್ಳನ್ನು ತೆಗೆದಂತಾಗಿದೆ : ಶೋಭ ಕರಂದ್ಲಾಜೆ…

298
firstsuddi

ನವದೆಹಲಿ : ಕಾಶ್ಮೀರದ ವಿಷಯದಲ್ಲಿ ಬಹಳ ಹಿಂದಿನ ಕನಸು ಇಂದು ನನಸಾಗಿದೆ ಎಂದು ಸಂಸದೆ ಶೋಭ ಕರಂದ್ಲಾಜೆ ಅವರು ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಸಂತಸ ವ್ಯಕ್ತಪಡಿಸಿದ್ದು, ಕಾಶ್ಮೀರದ ವಿಚಾರದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದಿಂದ ಬಹಳ ಸಂತಸವಾಗಿದೆ. ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡಿದರಿಂದ ಒಂದು ರೀತಿಯಲ್ಲಿ ಕಾಲಿಗೆ ಹೊಕ್ಕಿದ್ದ ಮುಳ್ಳನ್ನು ತೆಗೆದಂತಾಗಿದ್ದು, ಬಹಳ ಹಿಂದಿನ ಕನಸು ಇಂದು ನನಸಾಗಿದೆ. ಜನಸಂಘದ ಸಂಸ್ಥಾಪಕ ಶಾಮ್ ಪ್ರಸಾದ್ ಮುಖರ್ಜಿ ಅವರು ಈ ವಿಧಿಯನ್ನು ರದ್ದುಗೊಳಿಸುವಂತೆ ಹೋರಾಡಿದ್ದರು. ಅಲ್ಲದೇ ಒಂದು ದೇಶದಲ್ಲಿ ಎರಡು ಧ್ವಜ ಹಾಗೂ ಇಬ್ಬರು ಪ್ರಧಾನಿ ಇರಬಾರದು ಎಂದುಕೊಂಡಿದ್ದರು. ಅದರಂತೆ ಇಂದು ಕೇಂದ್ರ ಸರ್ಕಾರ 370ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಬಹಳ ಹಿಂದಿನ ಕನಸ ಇಂದು ನನಸಾಗಿದೆ.
ಕಾಶ್ಮೀರದಲ್ಲಿ ಪ್ರತಿಪಕ್ಷ ನಾಯಕರುಗಳಿಗೆ ತಿಳಿಯದಂತೆ ಈ ವಿಷಯವನ್ನು ದೂರ ಇಡಲಾಗಿತ್ತು. ಹೀಗಾಗಿ ಕಾಶ್ಮೀರದ ಪ್ರತಿಪಕ್ಷ ನಾಯಕರನ್ನು ಗೃಹ ಬಂಧನದಲ್ಲಿಡಲಾಗಿದೆ. ದೇಶದ ಭದ್ರತೆ ದೃಷ್ಟಿಯಿಂದ ಕೆಲವು ನಿರ್ಧಾರಗಳನ್ನು ದಢೀರ್ ತೆಗೆದುಕೊಳ್ಳಬೇಕಾಯಿತು. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ವಿಚಾರವನ್ನು ಗೌಪ್ಯವಾಗಿಟ್ಟಿದ್ದರು. ಇಲ್ಲದಿದ್ದರೆ ಗಲಾಟೆ, ಭಯೋತ್ಪಾದನೆಗಳಂತಹ ಕೃತ್ಯಗಳು ನಡೆಯುತ್ತಿದ್ದವು. ಕೇಂದ್ರ ಸರ್ಕಾರದ ಈ ನಿರ್ಣಯದಿಂದ ಕಾಶ್ಮೀರಕ್ಕಾಗಿ ಹೋರಾಡಿ ಬಲಿಯಾದ ನಮ್ಮ ಸೈನಿಕರು ಹಾಗೂ ಸಾರ್ವಜನಿಕರ ಆತ್ಮಕ್ಕೆ ಇಂದು ತೃಪ್ತಿಯಾಗಿರುತ್ತದೆ ಎಂದು ಹೇಳಿದರು.