ಕೊಟ್ಟಿಗೆಹಾರ : ಮಂಗಳೂರಿನ ಲೇಡಿಹಿಲ್ ಸರ್ಕಲ್‍ಗೆ ನಾರಾಯಣಗುರು ಹೆಸರಿಡುವಂತೆ ಬ್ರಹ್ಮಶ್ರೀ ನಾರಾಯಣಗುರು ಸಮಾಜಸೇವಾ ಸಂಘ ಆಗ್ರಹ…

259
firstsuddi

ಕೊಟ್ಟಿಗೆಹಾರ : ಮಂಗಳೂರಿನ ಲೇಡಿಹಿಲ್ ಸರ್ಕಲ್‍ಗೆ ಬ್ರಹ್ಮಶ್ರೀ ನಾರಾಯಣಗುರು ಹೆಸರಿಡುವಂತೆ ಬ್ರಹ್ಮಶ್ರೀ ನಾರಾಯಣಗುರು ಸಮಾಜಸೇವಾ ಸಂಘದ ಅಧ್ಯಕ್ಷ ಯೋಗೇಶ್ ಆಗ್ರಹಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶೋಷಿತರ ಪಾಲಿಗೆ ಪ್ರಕಾಶಮಯ ಸೂರ್ಯನಾಗಿ, ಜ್ಞಾನದಲ್ಲಿ ಶಂಕರನಾಗಿ, ನಮ್ಮ ದೇಶ ಕಂಡ ಜಾತ್ಯಾತೀತ ಗುರುಗಳಾದ ಬ್ರಹ್ಮಶ್ರೀ ನಾರಾಯಣಗುರು ಪುಣ್ಯ ನಾಮವನ್ನು ಮಂಗಳೂರಿನ ಲೇಡಿ ಹಿಲ್ ಸರ್ಕಲ್‍ಗೆ ನಾಮಕರಣ ಗೊಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಸಮಾಜಸೇವಾ ಸಂಘದ ಪಧಾಧಿಕಾರಿಗಳಾದ ವೆಂಕಟೇಶ್, ಉದಯ್, ತಾರೂ, ರಘು, ಪ್ರವೀಣ್, ಯೋಗೇಶ್, ಶರತ್, ರವಿ, ಅರುಣ್ ಇದ್ದರು.