ಮೂಡಿಗೆರೆ : ಮಹತ್ವದ ಕಾರ್ಯಾಚರಣೆ ನಡೆಸಿರುವ ಮೂಡಿಗೆರೆ ಪೊಲೀಸರು ನಕಲಿ ನೋಟು ತಯಾರಿಸುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ.
ಪಟ್ಟಣದ ಕುಟ್ಟಿ ಅಂಗಡಿ ರಸ್ತೆಯ ಪ್ರಮೋದ್ ಜೈನ್(35), ಛತ್ರಮೈದಾನ ನಿವಾಸಿ ಸಲ್ಮಾನ್(23) ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರಿಂದ ಅಸಲಿ 2 ಸಾವಿರ ರೂ ಮುಖಬೆಲೆಯ ನಾಲ್ಕು ನೋಟುಗಳು, ನಕಲಿ 2 ಸಾವಿರ ರೂ ಮುಖಬೆಲೆಯ 9 ನೋಟುಗಳು, ಒಂದು ಬದಿ ಜೆರಾಕ್ಸ್ ತೆಗೆದ 350 ಎ4 ಶೀಟ್ಗಳು (ಒಂದು ಹಾಳೆಯಲ್ಲಿ ಮುದ್ರಿತವಾಗಿರುವ 4 ನೋಟುಗಳು) ಒಂದು ಕಲರ್ ಜೆರಾಕ್ಸ್ ಯಂತ್ರವನ್ನು ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿ ಕಲೆ ಹಾಕಿದ ಮೂಡಿಗೆರೆ ಪೊಲೀಸರು ಸರ್ಕಲ್ ಇನ್ಸ್ ಪೆಕ್ಟರ್ ಜಗನ್ನಾಥ್, ಠಾಣಾಧಿಕಾರಿ ರವಿ, ಸಿಬ್ಬಂದಿಗಳಾದ ವಸಂತ್, ತೇಜು ಮೂರ್ತಿ, ಗಿರೀಶ್, ಮಂಜು, ನಂದನ್, ಚೇತನ್ ಅವರ ತಂಡ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.










