ಭುವನೇಶ್ವರ : ಕೊನಾರ್ಕ್ ಎಕ್ಸ್ಪ್ರೆಸ್ ರೈಲಿನಲ್ಲಿ ಸಾಗಿಸುತ್ತಿದ್ದ ಸುಮಾರು 16 ಕೋಟಿ ಮೌಲ್ಯದ 32 ಕೆ.ಜಿ ಚಿನ್ನವನ್ನು ಗವರ್ನ್‍ಮೆಂಟ್ ರೈಲ್ವೇ ಪೊಲೀಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳವಾರ ರಾತ್ರಿ 11.30ರ ಸುಮಾರಿಗೆ ಮುಂಬೈಯಿಂದ ಭುವನೇಶ್ವರಕ್ಕೆ ಆಗಮಿಸಿದ ಕೊನಾರ್ಕ್ ಎಕ್ಸ್ಪ್ರೆಸ್ ರೈಲಿನಲ್ಲಿ ಅಕ್ರಮ ಚಿನ್ನ ಪತ್ತೆಯಾಗಿದ್ದು, ನಿನ್ನೆ ಅವುಗಳನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ನಾಲ್ವರನ್ನು ಕೂಡ ವಶಕ್ಕೆ ಪಡೆದುಕೊಳ್ಳಲಾಗಿದೆ. ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ದಾಖಲೆಗಳನ್ನು ಸಲ್ಲಿಸಲು ವಿಫಲರಾದ ಹಿನ್ನೆಲೆಯಲ್ಲಿ ವಿಚಾರಣೆಗಾಗಿ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಆರ್ ಪಿ ಸ್ಪಷ್ಟಪಡಿಸಿದೆ
ಬಂಧಿತ ನಾಲ್ವರನ್ನು ಮುಂಬೈ ಮೂಲದ ಹಸ್ಮುಖಲಾಲ್ ಜೈನ್, ಸುರೇಶ್ ಸಹದೇವ್ ಖರೆ, ಮಹೇಶ್ ಭೋಮ್ಸರ್ ಮತ್ತು ದೀಪಕ್ ಪಟೇಲ್ ಎಂದು ಗುರುತಿಸಲಾಗಿದೆ. ಒಟ್ಟು ನಾಲ್ಕು ಚೀಲಗಳಲ್ಲಿ ತಲಾ 8 ಕೆ.ಜಿ.ಯಷ್ಟು ಚಿನ್ನವಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.










