ಕೊರೊನಾಗೆ ಬಲಿಯಾದ ತಂದೆ-ತಾಯಿ ; ಅನಾಥವಾಯ್ತು ನಾಲ್ಕು ವರ್ಷದ ಕಂದಮ್ಮ..!

194
firstsuddi

ಚಾಮರಾಜನಗರ : ಮಹಾಮಾರಿ ಕೊರೊನಾಗೆ ತಂದೆ-ತಾಯಿ ಇಬ್ಬರೂ ಬಲಿಯಾಗಿದ್ದು, ನಾಲ್ಕು ವರ್ಷದ ಬಾಲಕಿ ಅನಾಥವಾಗಿದ್ದಾಳೆ. ತಾಲ್ಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ ಗುರುಪ್ರಸಾದ್ ಎಂಬವವರು ಕಳೆದ ನಾಲ್ಕು ದಿನಗಳ ಹಿಂದೆ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದರು. ಇವರ ಪತ್ನಿ ರಶ್ಮಿಗೂ ಕೂಡ ಸೋಂಕು ವಕ್ಕರಿಸಿದ್ದು, ನಿನ್ನೆ ಇವರು ಸಹ ಕೊನೆಯುಸಿರೆಳೆದಿದ್ದಾರೆ. ಇನ್ನೂ ಸೋಂಕು ತಗುಲಿದ ವಿಚಾರ ತಿಳಿದು ಕೊತ್ತಲವಾಡಿ ಗ್ರಾಮಕ್ಕೆ ಬಂದು ಆರೈಕೆ ಮಾಡಿದ್ದ ರಶ್ಮಿ ಅವರ ತಂದೆ-ತಾಯಿಗೂ ಈಗ ಕೊರೊನಾ ದೃಢಪಟ್ಟಿದ್ದು, ಸದ್ಯ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟಾರೆ ಹೆತ್ತವರನ್ನು ಕಳೆದುಕೊಂಡ ನಾಲ್ಕು ವರ್ಷದ ಕಂದಮ್ಮ ಇದೀಗ ಅನಾಥವಾಗಿದೆ.