ಕೊರೊನಾ ವೈರಸ್‍ಗೆ ಓರ್ವ ಭಾರತೀಯ ಬಲಿ…

298
firstsuddi

ನವದೆಹಲಿ : ಚೀನಾದಲ್ಲಿ ಆರಂಭವಾದ ಕೊರೊನಾ ವೈರಸ್ ಈಗಾ ವಿಶ್ವದಾಧ್ಯಂತ ವ್ಯಾಪಕವಾಗಿ ಹರಡಿದ್ದು, ಈಗಾ ಕೊರೊನಾ ವೈರಸ್‍ನಿಂದ ಓರ್ವ ಭಾರತೀಯ ಮೃತಪಟ್ಟಿದ್ದು, ಇದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ. ಇಂಗ್ಲೆಂಡ್‍ನಲ್ಲಿ ವಾಸವಿದ್ದ ಭರತೀಯ ಮೂಲದ ಮನೋಹರ್ ಕೃಷ್ಣ ಪ್ರಭು (80) ಅವರು ಲಂಡನ್‍ನ ವ್ಯಾಟ್ ಪೋರ್ಟ್ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ಖಚಿತ ಪಡಿಸಿದ್ದು, ಈ ಮೂಲಕ ಇಂಗ್ಲೆಂಡ್‍ನಲ್ಲಿ ಕೊರೊನಾ ವೈರಸ್‍ನಿಂದ ಮೃತಪಟ್ಟ 6ನೇ ವ್ಯಕ್ತಿ ಎಂದು ತಿಳಿಸಿದ್ದಾರೆ. ಅಲ್ಲದೇ ಕೊರೊನಾ ವೈರಸ್‍ನಿಂದ ಭಾರತೀಯ ಮೂಲದವರು ಮೃತಪಟ್ಟಿರುವುದು ಮೊದಲ ಪ್ರಕರಣ ಇದಾಗಿದೆ. ಅಲ್ಲದೇ ಇವರ ಮಗನಿಗೂ ಕೂಡಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.