ಕೊರೊನಾ ಸೋಂಕಿನಿಂದ ತಮಿಳುನಾಡು ಕಾಂಗ್ರೆಸ್ ಕಾರ್ಯಕಾರಿ ಅಧ್ಯಕ್ಷ ಹೆಚ್. ವಸಂತ್ ಕುಮಾರ್ ನಿಧನ…

137
firstsuddi

ಚೆನ್ನೈ : ಮಹಾಮಾರಿ ಕೊರೊನಾ ಸೋಂಕಿಗೆ ತಮಿಳುನಾಡು ಕಾಂಗ್ರೆಸ್ ಕಾರ್ಯಕಾರಿ ಅಧ್ಯಕ್ಷ ಹೆಚ್.ವಸಂತ್ ಕುಮಾರ್(70) ಅವರು ಬಲಿಯಾಗಿದ್ದಾರೆ. ವಸಂತ್ ಕುಮಾರ್ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾದ ಬಳಿಕ ಆಗಸ್ಟ್ 10ರಂದು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಬಳಿಕ ಅವರ ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ. ವಸಂತ್ ಕುಮಾರ್ ಅವರ ಪತ್ನಿ ಹಾಗೂ ಮಗ ಕೂಡಾ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.