ನವದೆಹಲಿ/ ಬೆಂಗಳೂರು : ದೇಶದಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆ ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲಿದ್ದಾರೆ.
ನಾಳೆಯ ಸಭೆಯಲ್ಲಿ ಅತಿ ಹೆಚ್ಚು ಸೋಂಕು ಪತ್ತೆಯಾಗುತ್ತಿರುವ ದೆಹಲಿ, ಮಹಾರಾಷ್ಟ್ರ, ಕರ್ನಾಟಕ, ಕೇರಳ, ಪಶ್ಚಿಮ ಬಂಗಾಳದಿಂದ ವರದಿ ಕೇಳಬಹುದು. ಟೆಸ್ಟಿಂಗ್ ಹೆಚ್ಚಳ, ವ್ಯಾಕ್ಸಿನೇಷನ್ ಅಭಿಯಾನದ ಬಗ್ಗೆ ಸಮಾಲೋಚನೆ ನಡೆಸಬಹುದು. ಐಸಿಯು, ಆಕ್ಸಿಜನ್ ಬೆಡ್, ಆಕ್ಸಿಜನ್ ಲಭ್ಯತೆ, ಔಷಧಿಗಳ ಲಭ್ಯತೆ ಬಗ್ಗೆ ಪರಾಮರ್ಶೆ ನಡೆಯಬಹುದು. ಸೋಂಕು ನಿಯಂತ್ರಣಕ್ಕೆ ಟಫ್ ರೂಲ್ಸ್ ಜಾರಿ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ.
ಪ್ರಧಾನಿ ಮೋದಿ ಸಭೆ ಬಳಿಕ ತಜ್ಞರ ವರದಿಯನ್ನು ನೋಡಿಕೊಂಡು ಕಠಿಣ ಕ್ರಮಕೈಗೊಳ್ಳುವ ಸಾಧ್ಯತೆಯಿದೆ.










