ಮುಂಬೈ : ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ಲೋಪ ಕುರಿತಂತೆ ಸೈನಾ ನೆಹ್ವಾಲ್ ಟ್ವೀಟ್ ಮಾಡಿದ್ದರು. ಯಾವುದೇ ರಾಷ್ಟ್ರದಲ್ಲಿ ಪ್ರಧಾನ ಮಂತ್ರಿಗೆ ಭದ್ರತೆ ಸಿಗದೇ ಇದ್ದರೆ, ಆ ದೇಶದಲ್ಲಿ ನಾವೂ ಸುರಕ್ಷಿತವಾಗಿದ್ದೇವೆ ಎಂದು ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಬೇಸರ ವ್ಯಕ್ತಪಡಿಸಿದ್ದರು.
ಸೈನಾ ನೆಹ್ವಾಲ್ ಅವರ ಈ ಟ್ವೀಟ್ ಗೆ ಕಾಲಿವುಡ್ ನಟ ಸಿದ್ದಾರ್ಥ್, ವಿಶ್ವದ ಸಟಲ್ ಕಾಕ್ ಚಾಂಪಿಯನ್. ನಾವು ಭಾರತದ ರಕ್ಷಕರನ್ನು ಹೊಂದಿದ್ದೇವೆ ಎಂದು ಟ್ವೀಟ್ ಮಾಡಿದ್ದರು. ಪುರುಷನ ಮರ್ಮಾಂಗವನ್ನು ಗ್ರಾಮ್ಯವಾಗಿ ‘ಕಾಕ್’ ಎಂದು ಕರೆಯಲಾಗುತ್ತದೆ. ಈ ಟ್ವೀಟ್ ಮೂಲಕ ಸಿದ್ದಾರ್ಥ್ ಸೈನಾ ಅವರನ್ನು ಲೈಂಗಿಕವಾಗಿ ಅವಮಾನಿಸಿದ್ದಾರೆ ಎಂದು ಸಿದ್ಧಾರ್ಥ್ ಟ್ವೀಟ್ ಗೆ ಎಲ್ಲೆಡೆ ಭಾರಿ ಟೀಕೆ ವ್ಯಕ್ತವಾಗಿತ್ತು. ಇದೀಗ ಸಿದ್ಧಾರ್ಥ್ ಸೈನಾ ಬಳಿ ಕ್ಷಮೆಯಾಚಿಸಿದ್ದಾರೆ.
ಈ ಬಗ್ಗೆ ಟ್ವಿಟರ್ ನಲ್ಲಿ ಪತ್ರವೊಂದನ್ನು ಲಗತ್ತಿಸಿರುವ ಸಿದ್ಧಾರ್ಥ್ ‘ಪ್ರಿಯ ಸೈನಾ, ಕೆಲ ದಿನಗಳ ಹಿಂದೆ ನಿಮ್ಮ ಟ್ವೀಟ್ ಗೆ ಪ್ರತಿಕ್ರಿಯೆಯಾಗಿ ಬರೆದ ನನ್ನ ಅಸಭ್ಯ ಹಾಸ್ಯಕ್ಕಾಗಿ ನಾನು ನಿಮ್ಮಲ್ಲಿ ಕ್ಷಮೆಯಾಚಿಸಲು ಬಯಸುತ್ತೇನೆ. ನಾನು ಅನೇಕ ವಿಷಯಗಳಲ್ಲಿ ನಿಮ್ಮೊಂದಿಗೆ ಭಿನ್ನಾಭಿಪ್ರಾಯ ಹೊಂದಿರಬಹುದು, ಆದರೆ ನಾನು ನಿಮ್ಮ ಟ್ವೀಟ್ ಓದಿದಾಗ ನಿರಾಶೆ ಅಥವಾ ಕೋಪಗೊಂಡಿದ್ದೆ’ ಅಲ್ಲದೆ ನನ್ನ ಟ್ವೀಟ್ನಲ್ಲಿ ‘ದುರುದ್ದೇಶಪೂರಿತ’ ಉದ್ದೇಶ ಹೊಂದಿಲ್ಲ, ಅಲ್ಲದೇ ತಾನೊಬ್ಬ ‘ಸ್ತ್ರೀವಾದಿ ಮಿತ್ರ’ ಎಂದು ಸಿದ್ದಾರ್ಥ್ ಸ್ಪಷ್ಟಪಡಿಸಿದ್ದಾರೆ. ನನ್ನ ಟ್ವೀಟ್ ನಲ್ಲಿ ಯಾವುದೇ ಲಿಂಗದ ಬಗ್ಗೆ ಬರೆದಿರಲಿಲ್ಲ. ಸ್ಪಷ್ಟಪಡಿಸಿದ್ದಾರೆ.
ನಾವು ಈ ವಿಚಾರಕ್ಕೆ ಅಂತ್ಯ ಹಾಡೋಣ, ನೀವು ನನ್ನ ಪತ್ರವನ್ನು ಸ್ವೀಕರಿಸುತ್ತೀರಿ ಎಂದು ನಾನು ಭಾವಿಸುತ್ತೇನೆ. ನೀವು ಯಾವಾಗಲೂ ನನ್ನ ಚಾಂಪಿಯನ್ ಎಂದು ಹೇಳಿದ್ದಾರೆ.
Dear @NSaina pic.twitter.com/plkqxVKVxY
— Siddharth (@Actor_Siddharth) January 11, 2022










