ನವದೆಹಲಿ : ಉದಯಪುರದಲ್ಲಿ ಹಿಂದೂ ಟೈಲರ್ ಹತ್ಯೆ ಸಂಬಂಧ ದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು, ಸೋಶಿಯಲ್ ಮಿಡಿಯಾದಲ್ಲಿ ಸ್ಟೇಟಸ್ ಹಾಕಿದ್ದು ತಪ್ಪಾ? ಕೊಲ್ಲೋದು ಒಂದೇ ಮಾರ್ಗ ಅನ್ನೊದಾದ್ರೆ ಬಹಳಷ್ಟು ಜನರು ಬದುಕೋ ಅರ್ಹತೆ ಕಳೆದುಕೊಳ್ಳುತ್ತಾರೆ. ಇಂತಹ ಅಸಹಿಷ್ಣುತೆ ಮಾನಸಿಕತೆಯನ್ನು ಕಿತ್ತುಹಾಕದಿದ್ದರೆ ಇನ್ನಷ್ಟು ಘಟನೆಗಳು ನಡೆಯುತ್ತವೆ ಎಂದು ಎಚ್ಚರಿಸಿದ್ದಾರೆ.
ನಮ್ಮದೇ ನೆಲದಲ್ಲಿ ಮತಾಂಧತೆ ಕ್ರೌರ್ಯ ನಡೆದಿದೆ. ಹಿಂದೂಗಳ ಮೇಲೆ ಆಗಿರುವ ದೌರ್ಜನ್ಯಕ್ಕೆ ಹಾಗಿದ್ರೆ ಏನೇಲ್ಲ ಮಾಡಬಹುದಿತ್ತು? ಮೊದಲು ಪ್ರಚೋದನೆ ಕೊಡುವ ಮೂಲ ಹುಡುಕಿ ಜಾಲವನ್ನು ಬೇರು ಸಮೇತ ಕಿತ್ತುಹಾಕಬೇಕು. ರಾಜಾಸ್ಥಾನದಲ್ಲಿ ಓಲೈಕೆ ರಾಜಕಾರಣ ನಿಲ್ಲಬೇಕು. ಏಕೆಂದರೆ ಓಲೈಕೆ ರಾಜಕಾರಣದಿಂದಲೇ ದೇಶ ಇಬ್ಭಾಗವಾಯ್ತು. ನಿತ್ಯ ದೇವರ ಅಪಮಾನ ಮಾಡಲಾಗುತ್ತಿದೆ. ಇದೆಲ್ಲವನ್ನು ಬಿಡಬೇಕು ಸ್ವಧರ್ಮವನ್ನು ಪ್ರೀತಿಸಬೇಕು, ಪರಧರ್ಮವನ್ನು ಗೌರವಿಸಬೇಕು ಎಂದರು.










