ಕೊಳಚೆ ತುಂಬಿದ ಸ್ಥಳದಲ್ಲೇ ಕಮಲ ಅರಳುತ್ತದೆ : ನರೇಂದ್ರ ಮೋದಿ…

231
firstsuddi

ವಾರಾಣಸಿ : ಲೋಕಸಭಾ ಚುನಾವಣೆಯ ಪ್ರಚಾರ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿಯ ಚುನಾವಣೆಯಲ್ಲಿ ನಾನು ಗೆಲ್ಲುತ್ತೀನೋ, ಇಲ್ಲವೋ ಎನ್ನುವುದು ಮುಖ್ಯವಲ್ಲ ಆದರೆ ದೇಶದಲ್ಲಿ ಪ್ರಜಾಪ್ರಭುತ್ವ ಗೆಲ್ಲಬೇಕು. ಜನರ ಪ್ರೀತಿ ಹಾಗೂ ವಿಶ್ವಾಸಕ್ಕೆ ನಾನು ಪ್ರತಿಕ್ಷಣವೂ ಆಭಾರಿಯಾಗಿರುತ್ತೇನೆ. ತಾಯಂದಿರು ಹಾಗೂ ಸಹೋದರಿಯರು 21ನೇ ಶತಮಾನದ ಶಕ್ತಿಯಾಗಿದ್ದಾರೆ. ಎಲ್ಲಾ ಅಭ್ಯರ್ಥಿಗಳು ಗೌರವಯುತರೇ, ಶತ್ರುಗಳಲ್ಲ. ನನ್ನನ್ನು ಯಾರಾದರೂ ದೂರಿದರೆ ನೀವು ಚಿಂತೆ ಮಾಡಬೇಡಿ. ಎಲ್ಲಾ ಬೈಗುಳಗಳನ್ನು ನನ್ನ ಖಾತೆಗೆ ಪೋಸ್ಟ್ ಮಾಡಿ. ಕೊಳಚೆ ತುಂಬಿದ ಸ್ಥಳದಲ್ಲೇ ಕಮಲ ಅರಳುತ್ತದೆ. ನಾನು ಶ್ರೀಮಂತ ಸಮುದಾಯದಿಂದ ಬಂದವನಲ್ಲ. ನಾನು ಬಿಜೆಪಿಯ ಓರ್ವ ಕಾರ್ಯಕರ್ತ ಅಷ್ಟೇ ಎಂದು ಹೇಳಿದರು.