ಮೂಡಿಗೆರೆ ಹೆಚ್‍ಪಿ ಪೆಟ್ರೋಲ್ ಬಂಕ್‍ನಲ್ಲಿ ಕಳ್ಳತನ ಮಾಡಿದ್ದ ಆರೋಪಿ ಬಂಧನ…

216
firstsuddi

ಮೂಡಿಗೆರೆ : ಪಟ್ಟಣದ ಗಂಗನಮಕ್ಕಿ ಪೆಟ್ರೋಲ್ ಬಂಕ್‍ನಲ್ಲಿ ಸುಮಾರು 2.89ಲಕ್ಷ ರೂ ನಗದು ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ ಮೂಡಿಗೆರೆ ಪೊಲೀಸರು ಯಶಸ್ವಿಯಾಗಿದ್ದಾರೆ. ಸೋಮವಾರ ತಡರಾತ್ರಿ ಪೆಟ್ರೋಲ್ ಬಂಕ್‍ನಲ್ಲಿ ಕೆಲಸ ಮಾಡುತ್ತಿದ್ದ ಕೃಷ್ಣ ಎಂಬಾತ ಕಳ್ಳತನ ಮಾಡಿದ್ದು, ನನಗೆ ಯಾರೋ ಹಲ್ಲೆ ಮಾಡಿ ಹಣವನ್ನು ಕಿತ್ತುಕೊಂಡು ಹೋದರು ಎಂದು ಮಾಲಿಕರ ಬಳಿ ಹೇಳಿಕೊಂಡಿದ್ದು, ಅದರಂತೆ ಪೊಲೀಸ್ ಠಾಣೆಗೆ ಮಾಲಿಕರು ದೂರು ನೀಡಿದ್ದು, ತನಿಖೆ ನಡೆಸಿದ ಮೂಡಿಗೆರೆ ಪೊಲೀಸರು ಪೆಟ್ರೋಲ್ ಬಂಕ್ ಸಿಬ್ಬಂಧಿ ಕೃಷ್ಣನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದು, ಆರೋಪಿಯಿಂದ 2.89ಲಕ್ಷ ರೂ ಹಣವನ್ನು ವಶಪಡಿಸಿಕೊಂಡಿದ್ದಾರೆ.