ಮೈಸೂರು : ವಾಟರ್ ಮ್ಯಾನ್ ಒಬ್ಬರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲ್ಲೂಕಿನ ನೇರಳೆ ಗ್ರಾಮ ಪಂಚಾಯಿತಿ ಮುಂಭಾಗ ನಡೆದಿದೆ.
ಹಂಪಾಪುರ ಗ್ರಾಮದ ಕುಮಾರಸ್ವಾಮಿ ಆತ್ಮಹತ್ಯೆಗೆ ಯತ್ನಿಸಿದ ವಾಟರ್ ಮ್ಯಾನ್. ನೇರಳೆ ಗ್ರಾಮ ಪಂಚಾಯಿತಿ ಹಂಪಾಪುರ ಗ್ರಾಮದಲ್ಲಿ ಕಳೆದ ಎಂಟು ವರ್ಷದಿಂದ ವಾಟರ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಕುಮಾರಸ್ವಾಮಿಯನ್ನು ಕೆಲಸದಿಂದ ವಜಾ ಮಾಡಿಲಾಗಿತ್ತು. ಬಳಿಕ ಇದನ್ನು ಪ್ರಶ್ನಿಸಿ ಕುಮಾರಸ್ವಾಮಿ ಕೋರ್ಟ್ ಮೊರೆ ಹೋಗಿದ್ದರು.
ಕುಮಾರಸ್ವಾಮಿಯನ್ನ ಕೆಲಸದಲ್ಲಿ ಮುಂದುವರಿಸಲು ಕೋರ್ಟ್ ಆದೇಶ ನೀಡಿದೆ. ಆದ್ರೆ ಕೋರ್ಟ್ ಆದೇಶವಿದ್ದರೂ ಕೆಲಸಕ್ಕೆ ನೇಮಿಸಿಕೊಂಡಿಲ್ಲ ಎಂದು ಕಚೇರಿ ಮುಂದೆಯೇ ಕುಮಾರಸ್ವಾಮಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಸದ್ಯ ಕುಮಾರಸ್ವಾಮಿಯನ್ನ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.










