ಕ್ವಾಡ್ ಶೃಂಗಸಭೆ : ಜಪಾನ್‍ಗೆ ಆಗಮಿಸಿದ ಪ್ರಧಾನಿ ಮೋದಿ.

66
firstsuddi

ಟೋಕಿಯೋ : ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರ ಆಹ್ವಾನದ ಮೇರೆಗೆ ನರೇಂದ್ರ ಮೋದಿ ಜಪಾನ್ ಗೆ 2 ದಿನಗಳ ಭೇಟಿ ನೀಡಿದ್ದಾರೆ.

ಮೇ 24ರಂದು ಟೋಕಿಯೋ ನಗರದಲ್ಲಿ ನಡೆಯಲಿರುವ ಕ್ವಾಡ್ ರಾಷ್ಟ್ರಗಳ ನಾಯಕರ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಪಾಲ್ಗೊಳ್ಳಲು ಇಂದು ಜಪಾನ್ ನ ಟೋಕಿಯೋಗೆ ಆಗಮಿಸಿದ್ದು, ಮೋದಿ ಅವರನ್ನು ಟೋಕಿಯೋದಲ್ಲಿ ಆತ್ಮೀಯವಾಗಿ ಸ್ವಾಗತಿಸಿದ್ದಾರೆ.

ಕ್ವಾಡ್ ಶೃಂಗಸಭೆಯಲ್ಲಿ ಮೋದಿ ಮಾತ್ರವಲ್ಲದೇ, ಜಪಾನ್ ಪ್ರಧಾನಿ ಫ್ಯೂಮಿಯೊ ಕಿಷಿದಾ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಆಸ್ಟ್ರೇಲಿಯಾದ ನಿಯೋಜಿತ ಆಂಥೋನಿ ಅಲ್ಬನೀಸ್ ಭಾಗವಹಿಸಲಿದ್ದಾರೆ.

ಇನ್ನು ಪ್ರವಾಸಕ್ಕೂ ಮುನ್ನ ಮೋದಿ ಜಪಾನ್ ನಲ್ಲಿನ ಎರಡನೇ ವ್ಯಕ್ತಿಗತ ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದೇನೆ, ನಾವು ಪ್ರಾದೇಶಿಕ ಬೆಳವಣಿಗೆಗಳು ಮತ್ತು ಸಮಕಾಲೀನ ಜಾಗತಿಕ ಸಮಸ್ಯೆಗಳ ಕುರಿತು ನಮ್ಮ ಮಾತುಕತೆಗಳನ್ನು ಮುಂದುವರಿಸುತ್ತೇವೆ ಎಂದು ಹೇಳಿದ್ದರು.