ಗಡಿಯಲ್ಲಿ ಚೀನಾ ಸೈನಿಕರ ಅಟ್ಟಹಾಸ-ಭಾರತೀಯ ಸೇನೆಯ ಮೂವರು ಯೋಧರು ಹುತಾತ್ಮ…

187
firstsuddi

ಲಡಾಖ್ : ಗಡಿಯಲ್ಲಿ ಚೀನಾ ಸೈನಿಕರು ಗುಂಡಿನ ದಾಳಿ ನಡೆಸಿದ್ದು, ಇದರಲ್ಲಿ ಭಾರತೀಯ ಸೇನೆಯ ಕರ್ನಲ್ ಹಾಗೂ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಚೀನಾ ಸೈನಿಕರು ಭಾರತದ ಗಡಿಗೆ ಅತಿಕ್ರಮ ಪ್ರವೇಶ ಮಾಡಿದ್ದರು. ಅತಿಕ್ರಮ ಪ್ರವೇಶದಿಂದ ಹಿಂದೆ ಸರಿಯುವಂತೆ ಚೀನಾ ಸೈನಿಕರಿಗೆ ಭಾರತೀಯ ಯೋಧರು ಎಚ್ಚರಿಕೆ ನೀಡಿದ್ದರೂ ಕೂಡಾ ಇದು ಯಾವುದನ್ನೂ ಲೆಕ್ಕಿಸದೆ ನಿನ್ನೆ ರಾತ್ರಿ ಪೂರ್ವ ಲಡಾಕ್‍ನಲ್ಲಿ ಚೀನಾ ಸೈನಿಕರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಪರಿಣಾಮ ಭಾರತೀಯ ಸೇನೆಯ ಕರ್ನಲ್ ಸೇರಿದಂತೆ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಪರಿಸ್ಥಿತಿ ನಿಭಾಯಿಸಲೂ ಎರಡೂ ಸೇನೆಯ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.