ಗಣಪತಿ ಹಬ್ಬವನ್ನು ಯಶಸ್ವಿಯಾಗಿ ನಡೆಸುತ್ತೇವೆ : ಕೆ.ಎಸ್.ಈಶ್ವರಪ್ಪ.

59
firstsuddi

ಶಿವಮೊಗ್ಗ : ಗಣಪತಿ ಹಬ್ಬವನ್ನು ಯಶಸ್ವಿಯಾಗಿ ನಡೆಸುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ನಗರದಲ್ಲಿ ಮಧ್ಯಮದರೊಂದಿಗೆ ಮಾತನಾಡಿದ ಅವರು, ಹಿಂದುತ್ವದ ಮೇಲೆ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬಂದಿದೆ. ಹಾಗಾಗಿ ಗಣಪತಿ ಹಬ್ಬವನ್ನು ಯಶಸ್ವಿಯಾಗಿ ನಡೆಸುತ್ತೇವೆ. ಯಾವುದೇ ಕಾರಣಕ್ಕೂ ಹಿಂದೆ ಸರಿಯಲ್ಲ. ಕೋವಿಡ್ ಹಿನ್ನೆಲೆ ಹಬ್ಬವನ್ನು ಹೇಗೆ ಆಚರಣೆ ಮಾಡಬೇಕು, ಎಷ್ಟು ಜನ ಸೇರಿಸಬೇಕು ಎಂಬುದನ್ನ ಮುಖ್ಯಮಂತ್ರಿಗಳು ಸಭೆ ನಡೆಸಿ ತೀರ್ಮಾನ ಮಾಡುತ್ತಾರೆ ಎಂದರು.

ಮೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೆ. ಜನರು ಮತ್ತು ಕಾರ್ಯಕರ್ತರು ಪಕ್ಷದೊಂದಿಗೆ ಇದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜನಾಶೀರ್ವಾದ ಯಾತ್ರೆಯಲ್ಲಿ ಜನ ಸೇರಿರುವುದನ್ನು ನಾನು ಭಾರತೀಯ ಜನತಾ ಪಕ್ಷದ ಸಚಿವನಾಗಿ ಒಪ್ಪುವುದಿಲ್ಲ. ಹಾಗಂತಾ, ಗಣೇಶ ಉತ್ಸವ ನಿಲ್ಲಿಸಬೇಕು ಎಂಬುವುದನ್ನು ಸಹ ನಾನು ಒಪ್ಪಲ್ಲ. ಅದರ ಕಡೆಗೂ ಗಮನ ನೀಡಬೇಕು ಎಂದರು.