ಗರ್ಭಿಣಿ ಪತ್ನಿ, 4 ವರ್ಷದ ಮಗಳ ಕತ್ತು ಹಿಸುಕಿ ಕೊಲೆ ಮಾಡಿದ ಯೋಧ…

67
firstsuddi

ನಾಂದೇಡ್: ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಕಂದಹಾರ್ ತಾಲೂಕಿನ ಬೋರಿ ಗ್ರಾಮದಲ್ಲಿ ಸೈನಿಕರೊಬ್ಬರು ತನ್ನ ಗರ್ಭಿಣಿ ಪತ್ನಿ ಹಾಗೂ 4 ವರ್ಷದ ಮಗಳನ್ನು ಕೊಲೆ ಮಾಡಿರುವ ಘಟನೆ ವರದಿಯಾಗಿದೆ.

ಏಕನಾಥ್ ಜಯಭಯ್ ಎಂಬುವವರು ಹೆಂಡತಿಯ ನಡತೆಯ ಮೇಲೆ ಸಂಶಯಗೊಂಡು ಆಕೆಯನ್ನು ಹಾಗೂ ಮಗಳನ್ನು ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಯೋಧ ಪೊಲೀಸರಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.

8 ತಿಂಗಳ ಗರ್ಭಿಣಿಯಾಗಿದ್ದ 23 ವರ್ಷದ ಭಾಗ್ಯಶ್ರೀ ಮತ್ತು ಆಕೆಯ 4 ವರ್ಷದ ಮಗಳು ಸರಸ್ವತಿಯನ್ನು ಆರೋಪಿ ಸೈನಿಕ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಮಲಕೋಳಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ದಾಖಲಾಗಿದೆ. ಸದ್ಯಕ್ಕೆ ಆ ಸೈನಿಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.