ಗಾಂಧೀಜಿ ಹಂತಕರನ್ನ ಬಿಜೆಪಿ ವೈಭವೀಕರಿಸುವ ಕೆಲಸ ಮಾಡ್ತಿದೆ : ಸೋನಿಯಾ ಗಾಂಧಿ.

50
firstsuddi

ಉದಯ್ ಪುರ: ರಾಜಸ್ಥಾನದ ಉದಯ್ ಪುರದಲ್ಲಿ ಇಂದಿನಿಂದ 3 ದಿನ ಕಾಂಗ್ರೆಸ್ ‘ಚಿಂತನ ಶಿಬಿರ’ ನಡೆಸುತ್ತಿದೆ. ಇಂದು ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ಮಾತನಾಡಿದರು. ಈ ವೇಳೆ, ಬಿಜೆಪಿ ವಿರುದ್ಧ ಹರಿಹಾಯ್ದ ಅವರು, ಗಾಂಧೀಜಿ ಹಂತಕರನ್ನ ಬಿಜೆಪಿ ವೈಭವೀಕರಿಸುವ ಕೆಲಸ ಮಾಡ್ತಿದೆ ಎಂದರು.

ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ ಎಂಬ ಘೋಷವಾಕ್ಯದೊಂದಿಗೆ ಪ್ರಧಾನಿ ಮೋದಿ ಆಡಳಿತದ ಚುಕ್ಕಾಣಿ ಹಿಡಿದಿದ್ದರು. ಇದರ ನಿಜವಾದ ಅರ್ಥ ಏನು ಎಂಬುದು ಇದೀಗ ಎಲ್ಲರಿಗೂ ಗೊತ್ತಾಗುತ್ತಿದೆ ಎಂದ ಸೋನಿಯಾ ಗಾಂಧಿ, ದ್ವೇಷದ ರಾಜಕಾರಣ ನಡೆಸುತ್ತಿರುವ ಬಿಜೆಪಿ ಜನರ ಜೀವನದ ಮೇಲೆ ದೊಡ್ಡ ಮಟ್ಟದ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಹೇಳಿದರು.

ದೇಶದ ಜನರು ನಿರಂತರ ಭಯ, ಅಭದ್ರತೆ ಸ್ಥಿತಿಯಲ್ಲಿ ಬದುಕುವಂತಹ ಸ್ಥಿತಿ ನಿರ್ಮಾಣವಾಗಿದ್ದು, ಅಲ್ಪಸಂಖ್ಯಾತರು ಇನ್ನಿಲ್ಲದ ರೀತಿಯಲ್ಲಿ ದಾಳಿಗೊಳಗಾಗುತ್ತಿದ್ದಾರೆ ಎಂದು ತಿಳಿಸಿದರು.