ಮಜಾಭಾರತ, ಗಿಚ್ಚಿ ಗಿಲಿಗಿಲಿ, ಗಿಚ್ಚಿ ಗಿಲಿಗಿಲಿ 2, ಸೇರಿದಂತೆ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಯಾಗಿದ್ದ ಚಂದ್ರಪ್ರಭ ಅವರು ಇದೀಗ ಗುಟ್ಟಾಗಿ ಮದುವೆ ಮಾಡಿಕೊಂಡಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೆಲ ದಿನಗಳ ಹಿಂದೆ ಚಂದ್ರಪ್ರಭ ಅವರು ಭಾರತಿ ಪ್ರಿಯಾ ಎಂಬುವವರನ್ನು ಮದುವೆಯಾಗಿದ್ದಾರೆ. ಆದರೆ ಈ ಬಗ್ಗೆ ನಟ ಯಾವುದೇ ಅಪ್‌ಡೇಟ್ ನೀಡಿಲ್ಲ. ಮದುವೆಯಾಗಿರೋದನ್ನ ಯಾಕೆ ಮುಚ್ಚಿಟ್ರಿ? ಹೆಂಡತಿ ಸುಂದರವಾಗಿದ್ರೂ ಯಾಕೆ ಹೆಣ್ಣು ಬೇಕು ಅಂತ್ತೀರಾ ಎಂದು ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕಿಡಿಕಾರಿದ್ದಾರೆ.
ದೇವಸ್ಥಾನದಲ್ಲಿ ಮದುವೆ ನಡೆದಿದೆ ಆನಂತರ ಮನೆ ಪ್ರವೇಶ ಮಾಡುವಾಗ ಪೂಜೆ ಮಾಡುತ್ತಿರುವ ವಿಡಿಯೋ ಅಪ್‍ಲೋಡ್ ಮಾಡಿದ್ದಾರೆ. ರೀಲ್ಸ್ ರೂಪದಲ್ಲಿ ಫೋಟೋ ಹಾಕಿದ್ದಾರೆ. ಭಾರತಿ ಪ್ರಿಯಾ ಅಪ್‍ಲೋಡ್ ಮಾಡುತ್ತಿರುವ ವೀಡಿಯೊ ಮತ್ತು ಫೋಟೋ ಪ್ರಕಾರ ಮದುವೆಯಾಗಿ ಒಂದು ವಾರ ಕಳೆದಿದೆ ಎಂದು ಹೇಳಲಾಗುತ್ತಿದೆ. ಎಲ್ಲದಕ್ಕೂ ಚಂದ್ರಪ್ರಭ ಉತ್ತರ ನೀಡುವವರೆಗೂ ಕಾದುನೋಡಬೇಕಿದೆ.










