ಗೋಧಿ, ಮೈದಾ ಸೇರಿದಂತೆ ಹಿಟ್ಟಿನ ರಫ್ತಿಗೆ ಭಾರತ ತಡೆ…

61
firstsuddi

ನವದೆಹಲಿ : ಗೋಧಿ ರಫ್ತಿಗೆ ಈಗಾಗಲೇ ನಿರ್ಬಂಧ ವಿಧಿಸಿರುವ ಭಾರತ, ಇದೀಗ ಗೋಧಿ ಹಿಟ್ಟು, ಮೈದಾ, ರವೆ ಸೇರಿದಂತೆ ಹಿಟ್ಟಿನ ರಫ್ತಿಗೆ ತಡೆ ಒಡ್ಡಿದೆ. ವಿದೇಶ ವ್ಯಾಪಾರ ಡೈರೆಕ್ಟರೇಟ್ ಜನರಲ್ (ಡಿಜಿಎಫ್ ಟಿ) ಕಚೇರಿಯ ಅಧಿಸೂಚನೆಯ ಪ್ರಕಾರ, ಈ ನಿರ್ಧಾರವು ಜುಲೈ 12 ರಿಂದ ಜಾರಿಗೆ ಬರಲಿದೆ.

ಗೋಧಿ ಮತ್ತು ಗೋಧಿ ಹಿಟ್ಟಿನ ರಫ್ತಿನ ಕುರಿತಾಗಿ ಜುಲೈ 6 ರಂದು ಹೊರಡಿಸಲಾದ ಅಧಿಸೂಚನೆಯ ಪ್ರಕಾರ ಈಗಾಗಲೇ ರಫ್ತಿಗೆ ಸಿದ್ಧಗೊಂಡಿರುವ ಹಿಟ್ಟಿಗೆ ಸಚಿವಾಲಯದ ಸಮಿತಿಯಿಂದ ಅನುಮತಿ ಪಡೆದುಕೊಳ್ಳುವುದು ಕಡ್ಡಾಯವಾಗಿದೆ.

ಜಾಗತಿಕ ಮಟ್ಟದಲ್ಲಿ ಗೋಧಿ ಮತ್ತು ಗೋಧಿ ಹಿಟ್ಟಿನ ಪೂರೈಕೆಗೆ ಉಂಟಾಗುತ್ತಿರುವ ಅಡೆತಡೆಗಳು ಅನೇಕ ಹೊಸ ಪಾಲುದಾರರನ್ನು ಸೃಷ್ಟಿಸಿವೆ. ಇದರಿಂದ ಬೆಲೆಗಳ ಏರಿಳಿತ ವಿಪರೀತವಾಗಿದ್ದು, ಗುಣಮಟ್ಟ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗಿವೆ ಎಂದು ಡಿಜಿಎಫ್ ಟಿ ಹೇಳಿದೆ. ಇದರಿಂದಾಗಿ ರಫ್ತು ವ್ಯಾಪಾರಕ್ಕೆ ನಿಷೇಧದ ನಿರ್ಧಾರವನ್ನು ತೆಗೆದುಕೊಂಡಿದೆ.