ಚಳಿಗಾಲ ಈಗಾಗಲೇ ಪ್ರಾರಂಭವಾಗಿದ್ದು, ಈ ಸಮಯದಲ್ಲಿ ಚರ್ಮದ ಆರೋಗ್ಯ ಕಾಪಾಡಿಕೊಳ್ಳುವುದು ಬಹುಮುಖ್ಯವಾಗಿದೆ. ವಾತಾವರಣದಲ್ಲಿ ಹಲವು ಬದಲಾವಣೆಗಳು ಉಂಟಾಗಿ ನಮ್ಮ ಚರ್ಮ ಒಡೆಯಲು, ಬಿರುಕು ಬಿಡಲು ಶುರು ಮಾಡುತ್ತದೆ. ಚಳಿಗಾಲದಲ್ಲಿ ಚರ್ಮದ ತೇವಾಂಶ ಆವಿಯಾಗಲು ಪ್ರಾರಂಭಿಸುತ್ತದೆ. ಈ ವೇಳೆ ಒಣ ಚರ್ಮ ಹೊಂದಿರುವವರ ಚರ್ಮ ಇನ್ನಷ್ಟು ಡ್ರೈ ಆಗಿ, ತ್ವಚೆ, ತುಟಿ, ಕಾಲಿನ ಪಾದ, ಹಿಮ್ಮಡಿ ಒಡೆದು ಬಿರುಕು ಬಿಡುತ್ತದೆ. ಈ ವೇಳೆ ಚರ್ಮದ ಆರೈಕೆಗೆ ಕ್ರೀಮ್‍ಗಳನ್ನು ಹಚ್ಚುವುದರ ಜೊತೆಗೆ ನಾವು ಸೇವಿಸುವ ಆಹಾರಗಳು ಕೂಡಾ ಪ್ರಮುಖವಾಗಿರುತ್ತದೆ. ಆದ್ದರಿಂದ ಈ ಸಮಯದಲ್ಲಿ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹುಮುಖ್ಯವಾಗಿದ್ದು, ಯಾವ ರೀತಿ ಚರ್ಮದ ರಕ್ಷಣೆ ಮಾಡಿಕೊಳ್ಳಬೇಕು ಎಂದು ಸರಳ ಟಿಪ್ಸ್‍ಗಳನ್ನು ಈ ಕೆಳಕಂಡಂತೆ ನೋಡೋಣ.
• ಹೆಚ್ಚು ನೀರನ್ನು ಕುಡಿಯಬೇಕು.
• ವಾರದಲ್ಲಿ ಎರಡು ಬಾರಿ ಎಣ್ಣೆ ಸ್ನಾನ ಮಾಡುವುದು ಒಳ್ಳೆಯದು.
• ಚಳಿಗಾಲದಲ್ಲಿ ಉದ್ದ ತೋಳಿನ ಬಟ್ಟೆಗಳನ್ನು ಬಳಸುವುದು ಉತ್ತಮ.
• ಲೋಳೆಸರವನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಸಮಯದ ನಂತರ ತೊಳೆಯುವುದರಿಂದ ಚರ್ಮ ಒಣಗುವುದು ಕಡಿಮೆಯಾಗುತ್ತದೆ.
• ಮೊಸರಿನಿಂದ ಮುಖವನ್ನು ತೊಳೆಯುವುದರಿಂದ ಚರ್ಮ ಡ್ರೈ ಆಗುವುದನ್ನು ತಡೆಯಬಹುದು.
• ಚಳಿಗಾಲದಲ್ಲಿ ಆದಷ್ಟು ಸೋಪ್‍ಗಳ ಬಳಕೆ ಕಡಿಮೆ ಮಾಡಿ ಕಡಲೆ ಹಿಟ್ಟನ್ನು ಬಳಸುವುದು ಒಳ್ಳೆಯದು.
• ಹಾಲಿನ ಕೆನೆ ಹಾಗೂ ಅರಿಶಿಣವನ್ನು ಮಿಶ್ರಣ ಮಾಡಿ ಹಚ್ಚುವುದರಿಂದ ಚರ್ಮ ಒಡೆಯುವುದು ಕಡಿಮೆಯಾಗುತ್ತದೆ.
• ಬೆಳಿಗ್ಗೆ ಮತ್ತು ರಾತ್ರಿ ಮುಖವನ್ನು ತೊಳೆದು ಮಾಯಿಶ್ಚರೈಸರ್ ಹಚ್ಚಬೇಕು.
• ತುಟಿಗೆ ಲಿಪ್ ಬಾಮ್ ಅಥವಾ ತುಪ್ಪ ಬಳಸುವುದರಿಂದ ತುಟಿ ಒಡೆಯುವುದು, ಬಿರುಕು ಬಿಡುವುದು ಕಡಿಮೆಯಾಗುತ್ತದೆ.
• ಸ್ನಾನಕ್ಕೆ ಉಗುರು ಬೆಚ್ಚಗಿನ ನೀರನ್ನು ಬಳಸುವುದು ಒಳ್ಳೆಯದು.
• ಕಡಲೆ ಹಿಟ್ಟಿನಿಂದ ಮುಖ ತೊಳೆಯುವುದರಿಂದ ಮುಖ ಒಡೆಯುವುದು ಕಡಿಮೆಯಾಗುತ್ತದೆ.
• ಚಳಿಗಾಲದಲ್ಲಿ ಕಾಲಿಗೆ ಸಾಕ್ಸ್ ಹಾಕಿಕೊಳ್ಳುವುದರಿಂದ ಪಾದಗಳು,ಹಿಮ್ಮಡಿ ಒಡೆಯುವುದು, ಬಿರುಕು ಬಿಡುವುದು ಕಡಿಮೆಯಾಗುತ್ತದೆ.
• ಹಾಲು ಮತ್ತು ಅರಿಶಿಣವನ್ನು ಮಿಶ್ರಣ ಮಾಡಿ ಚರ್ಮಕ್ಕೆ ಹಚ್ಚುವುದು ಉತ್ತಮ.
• ಚಳಿಗಾಲದಲ್ಲಿ ಟೀ, ಕಾಫಿ, ಮಧ್ಯವನ್ನು ಹೆಚ್ಚು ಸೇವಿಸದಿರುವುದು ಒಳ್ಳೆಯದು.
• ನೀರಿನಾಂಶವಿರುವ ಹಣ್ಣುಗಳನ್ನು ಈ ಸಮಯದಲ್ಲಿ ಸೇವಿಸುವುದು ಉತ್ತಮ.
• ಪ್ರತಿದಿನ ಚರ್ಮಕ್ಕೆ ಲೋಷನ್‍ಗಳನ್ನು ಹಚ್ಚುವುದು ಉತ್ತಮ.










