ಬಣಕಲ್ : ಭೋಪಾಲ್‍ನಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಕೊಟ್ಟಿಗೆಹಾರದ ತರುವೆ ಏಕಲವ್ಯ ವಸತಿ ಶಾಲೆಯ ಬಾಲಕಿಯರ ತಂಡಗಳು ಕಬಡ್ಡಿ ಪಂದ್ಯದಲ್ಲಿ ಚಿನ್ನದ ಪದಕ ಪಡೆಯುವುದರ ಮೂಲಕ ಸಾಧನೆ ಮಾಡಿದೆ.
14 ರ ಹರೆಯದ ಬಾಲಕಿಯರ ಕಬಡ್ಡಿ ಪಂದ್ಯಾವಳಿಯಲ್ಲಿ ವಿದ್ಯಾರ್ಥೀನಿಯರಾದ ಮಾನಸಾ, ಅಪೂರ್ವ, ವಿಜಯಾ, ಜೀವಿತಾ, ಸಿಂಚನಾ, ಸುಕನ್ಯಾ, ಮಂದಾರಾ, ವಿಜಯಲಕ್ಷ್ಮಿ, ಎಚ್.ಕೆ ಪವಿತ್ರಾ, ಮಹಾಲಕ್ಷ್ಮಿ, ಭೂಮಿಕಾ, ಪವಿತ್ರಾ ಅವರನ್ನೊಳಗೊಂಡ ತಂಡ ಪ್ರಥಮ ಪ್ರಶಸ್ತಿ ಪಡೆಯುವುದರ ಮೂಲಕ ಚಿನ್ನದ ಪದಕ ಪಡೆದಿದೆ.
19ರ ಹರೆಯದ ಬಾಲಕಿಯರ ಕಬಡ್ಡಿ ಪಂದ್ಯಾವಳಿಯಲ್ಲಿ ವಿದ್ಯಾರ್ಥೀನಿಯರಾದ ಸಿಂಧು, ಉಷಾ, ನಿರ್ಮಲಾ, ಅರ್ಪಿತಾ, ಭೂಮಿಕಾ, ಸ್ಪೂರ್ತಿ, ಕವನಾ, ನಿಶ್ಚಿತಾ, ಅಶ್ವಿನಿ, ಡಯಾನಾ, ಸಂಗೀತಾ, ಪ್ರೀತಿ ಅವರನ್ನೊಳಗೊಂಡ ತಂಡ ಪ್ರಥಮ ಸ್ಥಾನ ಪಡೆಯುವುದರ ಮೂಲಕ ಕಬಡ್ಡಿಯಲ್ಲಿ ರಾಜ್ಯಕ್ಕೆ ಚಿನ್ನದ ಪದಕ ತಂದು ಕೊಟ್ಟಿದ್ದಾರೆ.
100 ಮೀ ಓಟದಲ್ಲಿ ಮಾನಸ ಕಂಚು ಪಡೆದರೆ, ಕರಾಟೆ ಸ್ಪರ್ದೆಯಲ್ಲಿ ತೃಪ್ತಿ ಬೆಳ್ಳಿಯ ಪದಕ ಪಡೆದಿದ್ದಾರೆ. ಶಟಲ್ ಬ್ಯಾಡ್ಮಿಂಟನ್‍ನಲ್ಲಿ ತರುವೆಯ ಏಕಲವ್ಯ ಶಾಲೆ ಕಂಚು ಪಡೆದುಕೊಂಡಿತು. ಭೋಪಾಲ್‍ನಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಏಕಲವ್ಯ ಶಾಲೆಯ ತಂಡದಲ್ಲಿ 72 ವಿದ್ಯಾರ್ಥಿಗಳು ಭಾಗವಹಿಸಿದ್ದು ತರಬೇತುದಾರ ನಾಗಪ್ಪ ಬಿಸನಾಳ, ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜು ಮುಂದಾಳತ್ವ ವಹಿಸಿದ್ದಾರೆ ಎಂದು ಏಕಲವ್ಯ ವಸತಿ ಶಾಲೆಯ ಪ್ರಾಂಶುಪಾಲ ನಾಗರಾಜ್ ತಿಳಿಸಿದ್ದಾರೆ.
Home ಸ್ಥಳಿಯ ಸುದ್ದಿ ಮೂಡಿಗೆರೆ : ಭೋಪಾಲ್‍ನಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ತರುವೆ ಶಾಲೆಗೆ ಚಿನ್ನದ ಪದಕ…










