ಕೊಟ್ಟಿಗೆಹಾರ : ಅತ್ತಿಗೆರೆ ಸಹಿಪ್ರಾ ಶಾಲೆಯಲ್ಲಿ ಪೋಷಕರಿಗೆ ಆಟೋಟ ಸ್ಪರ್ದೆ…

398
firstsuddi

ಬಣಕಲ್: ಅತ್ತಿಗೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಕರಿಗೆ ಆಟೋಟ ಸ್ಪರ್ದೆ ನಡೆಯಿತು. ಪೋಷಕರಿಗಾಗಿ ಹಗ್ಗ ಜಗ್ಗಾಟ, ಗೋಣಿಚೀಲ ಓಟ, ಮ್ಯೂಸಿಕಲ್ ಚೇರ್, ಬಾಲ್ ಇನ್ ದ ಬಕೇಟ್, ಮ್ಯೂಸಿಕಲ್ ಚೇರ್, ಬೊಗಸೆಯಲ್ಲಿ ನೀರು, ಮುಂತಾದ ಆಟೋಟಗಳನ್ನು ಏರ್ಪಡಿಸಲಾಗಿತ್ತು.
ಅತ್ತಿಗೆರೆ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷರಾದ ಕಾಂತರಾಜ್ ಮಾತನಾಡಿ, ಪೋಷಕರಿಗೆ ಆಟೋಟ ಸ್ಪರ್ದೆಗಳನ್ನು ಏರ್ಪಡಿಸುವ ಮೂಲಕ ಪೋಷಕರು ಕ್ರೀಡೆಗಳಲ್ಲಿ ಭಾಗವಹಿಸಿ ತಮ್ಮ ಬಾಲ್ಯದಿನಗಳನ್ನು ನೆನಪಿಸಿಕೊಳ್ಳಲು ವೇದಿಕೆಯಾಗಿದೆ. ಪೋಷಕರು ಶಾಲೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದುಕೊಂಡು ವಿದ್ಯಾರ್ಥಿಗಳಿಗೆ ಪರಿಪೂರ್ಣ ಶಿಕ್ಷಣ ನೀಡಲು ಸಹಕಾರ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ರಾಜು, ಸಹ ಶಿಕ್ಷಕರಾದ ಕುಮಾರ್, ಹಂಸಲೇಖ, ಶೀಲಾ, ಮೈಮುನಾಬಿ, ಕವಿತಾ, ಪೋಷಕರಾದ ಪುಟ್ಟಸ್ವಾಮಿ, ರಮೇಶ್, ಬೆಳ್ಳಾಚಾರ್, ಮಹೇಶ್, ಲತಾ, ಕವಿತಾ, ಪಾರ್ವತಿ, ಉಮಾ, ಲಕ್ಷ್ಮಿ, ಮುಂತಾದವರು ಇದ್ದರು.