ಚಾರ್ಮಾಡಿ ಘಾಟ್‍ನಲ್ಲಿ ನಿಷೇಧದ ನಡುವೆಯೂ ಸೆಲ್ಫಿ-ಮೋಜುಮಸ್ತಿ…

963

ಮೂಡಿಗೆರೆ : ಆಗಸ್ಟ್ ತಿಂಗಳಲ್ಲಿ ಸುರಿದ ರಣಭೀಕರ ಮಳೆ ಹಿನ್ನೆಲೆ, ಚಾರ್ಮಾಡಿ ಘಾಟ್‍ನಲ್ಲಿ ಪದೇ ಪದೇ ಗುಡ್ಡ ಕುಸಿತ ಹಾಗೂ ಭೂ ಕುಸಿತ ಆಗುತ್ತಿದ್ದರಿಂದ ಜಿಲ್ಲಾಡಳಿತ ಪ್ರವಾಸಿಗರಿಗೆ ಅನುಕೂಲವಾಗುವಂತೆ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಮಾತ್ರ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದು, ಆದರೆ ಕೆಲವು ಪ್ರವಾಸಿಗರು ನಡುರಸ್ತೆಯಲ್ಲಿ ಮಧ್ಯದ ಬಾಟಲ್ ಹಿಡಿದು ರಸ್ತೆಯ ಮಧ್ಯದಲ್ಲೇ ಮೋಜುಮಸ್ತಿ ಮಾಡುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಜಿಲ್ಲಾಡಳಿತ ಮೋಜುಮಸ್ತಿ ಹಾಗೂ ಸೆಲ್ಫಿ ತೆಗೆಯುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದು, ಆದರೆ ಈ ಆದೇಶ ಯಾರೂ ಪಾಲಿಸದೇ ನಡುರಸ್ತೆಯಲ್ಲೇ ಬಾಟಲ್ ಹಿಡಿದು ಜೋರಾಗಿ ಕೇಕೇ ಹಾಕುವ ದೃಶ್ಯ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಕಂಡುಬಂದಿದ್ದು, ಕೆಲವು ತಿಂಗಳ ಹಿಂದೆ ಸೆಲ್ಫಿ ತೆಗೆಯಲು ಹೋಗಿ ಪ್ರಾಣ ಕಳೆದುಕೊಂಡ ಹಾಗೂ ಗಾಯಗೊಂಡ ಹಲವು ಘಟನೆಗಳು ನಡೆದಿದ್ದು, ಸೆಲ್ಫಿ ನಿಷೇಧದ ಸೂಚನಾಫಲಕವಿದ್ದರೂ ಕೂಡಾ ಪ್ರವಾಸಿಗರು ಫೋಟೋ ತೆಗೆಯುವುದನ್ನು ನಿಲ್ಲಿಸಿಲ್ಲ. ಈ ಬಗ್ಗೆ ಪೊಲೀಸ್ ಇಲಾಖೆ ಗಮನ ಹರಿಸಿ ಗಸ್ತು ವಾಹನ ತಿರುಗುವ ಮೂಲಕ ಪ್ರವಾಸಿಗರ ಮೋಜುಮಸ್ತಿಗೆ ಬ್ರೇಕ್ ಹಾಕಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.