ನವದೆಹಲಿ : ಚಾಲಕನ ನಿಯಂತ್ರಣ ತಪ್ಪಿ ಟ್ರಕ್ ಪಲ್ಟಿಯಾಗಿ 7 ಮಂದಿ ಮೃತಪಟ್ಟು, 5ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಬದೌನ್ನಲ್ಲಿ ನಡೆದಿದ್ದು, ಗೋಧಿ ಚೀಲ ತುಂಬಿಸಿಕೊಂಡು ಬದೌನ್ನಿಂದ ವೇಗವಾಗಿ ಬರುತ್ತಿದ್ದ ಟ್ರಕ್ ಟರ್ನ್ ಮಾಡುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಹತ್ತಿರದಲ್ಲಿದ್ದ ಚಹಾದಂಗಡಿಯ ಮೇಲೆ ಬಿದ್ದಿದ್ದು, ಚಹಾ ಅಂಗಡಿಯ ಬಳಿ ನಿಂತಿದ್ದ ಜನರು ಟ್ರಕ್ ಅಡಿಗೆ ಸಿಲುಕಿ 7ಮಂದಿ ಮೃತಪಟ್ಟು, 5ಮಂದಿ ಗಾಯಗೊಂಡಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಜಿಲ್ಲಾಡಳಿತ ಅಧಿಕಾರಿಗಳು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕತ್ಸೆ ಕೊಡಿಸಿದ್ದು, ಸ್ಥಳೀಯ ಶಾಸಕರಾದ ರಾಜೀವ್ ಕುಮಾರ್ ಸಿಂಗ್ ಅವರು ಆಸ್ಪತ್ರೆಗೆ ಆಗಮಿಸಿ ಗಾಯಾಳುಗಳಿಗೆ ಉಚಿತ ಚಿಕಿತ್ಸೆ ಹಾಗೂ ಮೃತರ ಕುಟುಂಬಕ್ಕೆ 2ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.










