ಚಿಕ್ಕಮಗಳೂರು : ಅತಿವೃಷ್ಠಿ ನಿವಾರಣೆಗೆ ಮಳೆ ದೇವರ ಮೊರೆ ಹೋದ ಮಲೆನಾಡಿಗರು…

389
firstsuddi

ಚಿಕ್ಕಮಗಳೂರು : ಅತೀವೃಷ್ಠಿ ನಿವಾರಣೆಗೆಂದು ಮಲೆನಾಡಿಗರು ಮಳೆ ದೇವರ ಮೊರೆ ಹೋಗಿದ್ದು, ಜಿಲ್ಲೆಯ ಶೃಂಗೇರಿಯಲ್ಲಿರುವ ಕಿಗ್ಗಾದ ಮಳೆ ದೇವರೆಂದೇ ಖ್ಯಾತಿಯಾಗಿರುವ ಋಷ್ಯಶೃಂಗನಿಗೆ ಶಾಸಕ ಟಿ.ಡಿ ರಾಜೇಗೌಡ ನೇತೃತ್ವದಲ್ಲಿ ಸ್ಥಳೀಯರು ವಿಶೇಷ ಪೂಜೆ, ರುದ್ರಾಭಿಷೇಕ ಪ್ರಾರ್ಥನೆ ಸಲ್ಲಿಸಲಾಯಿತು. ಮಳೆ ಬೇಕಾದಾಗ ಮಳೆಯಾಗಿಸಿ, ಬೇಡವಾದಾಗ ನಿಲ್ಲಿಸುವ ಶಕ್ತಿವಂತವಾಗಿರುವ ಋಷ್ಯಶೃಂಗ ದೇವರಿಗೆ ಕಳೆದ ವರ್ಷವೂ ಮಳೆ ನಿಲ್ಲಲು ಅಗಿಲು ಸೇವೆ ಮಾಡಲಾಗಿತ್ತು. ಸೇವೆಯ ಬಳಿಕ ಮಳೆ ನಿಂತಿತ್ತು. ಕಳೆದ ತಿಂಗಳಿನಿಂದ ಮಲೆನಾಡಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಅಕ್ಷರಶಃ ಮಲೆನಾಡೇ ಜಲಾವೃತಗೊಂಡಿತ್ತು. ಎರಡನೇ ಬಾರಿಯೂ ಮಲೆನಾಡಿನಲ್ಲಿ ವರುಣನ ಅಟ್ಟಹಾಸ ಮುಂದುವರೆದಿದ್ದು, ಮಳೆಗೆ ಹೆದರಿ ಮಳೆ ನಿವಾರಣೆಗೆಂದು ಮಲೆನಾಡಿಗರು ಋಷ್ಯಶೃಂಗನಿಗೆ ಕೈಮುಗಿದು ವಿಶೇಷ ಪೂಜೆ ಸಲ್ಲಿಸಿದರು.