ಚಿಕ್ಕಮಗಳೂರು : ಸ್ವಚ್ಚತೆಯ ಸಮಗ್ರ ನಿರ್ವಹಣೆಗಾಗಿ ಹೈದರಾಬಾದಿನ ಮಹಾತ್ಮಾ ಗಾಂಧಿ ರಾಷ್ಟ್ರೀಯ ಶಿಕ್ಷಣ ಪರಿಷತ್‍ನಿಂದ ನೀಡಲಾಗುವ ಪ್ರಸಕ್ತ ಸಾಲಿನ ಡಿಸ್ಟ್ರಿಕ್ಟ್ ಗ್ರೀನ್ ಚಾಂಪಿಯನ್ ಅವಾರ್ಡ್ ನಗರದ ಐಡಿಎಸ್‍ಜಿ ಸರ್ಕಾರಿ ಕಾಲೇಜಿಗೆ ಲಭಿಸಿದೆ.
ಐಡಿಎಸ್‍ಜಿ ಕಾಲೇಜಿನ ನೈರ್ಮಲ್ಯತೆ, ಶುಚಿತ್ವ, ಸಮರ್ಪಕ ನೀರಿನ ನಿರ್ವಹಣೆ, ತ್ಯಾಜ್ಯ ನಿರ್ವಹಣೆ, ಸಂಪನ್ಮೂಲ ನಿರ್ವಹಣೆ ಹಾಗೂ ಹಸಿರು ನಿರ್ವಹಣೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.
ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಸ್ವಚ್ಚತೆ ಮತ್ತು ನೈರ್ಮಲ್ಯ ವಿಷಯ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಶಿಕ್ಷಣ ಪರಿಷತ್ತಿನ ಸಂಚಾಲಕ ಮೆಲ್ವಿನ್ ನರೋನ ಅವರು ಕಾಲೇಜಿನ ಪ್ರಾಂಶುಪಾಲ ಡಾ|| ಕೆ.ಎ.ರಾಜಣ್ಣ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು.
ರಾಷ್ಟ್ರೀಯ ಯೋಜನಾಧಿಕಾರಿ ನವೀನ್, ಡಾ|| ಎಸ್.ಕೆ.ಸತೀಶ್, ಪ್ರಾಧ್ಯಾಪಕ ಪ್ರೊ|| ಕೆ.ಎನ್.ಲಕ್ಷ್ಮೀಕಾಂತ್ ಉಪಸ್ಥಿತರಿದ್ದರು.










