ಚಿಕ್ಕಮಗಳೂರು : ಕೃಷಿ ಚಟುವಟಿಕೆ ಮಾಡುವವರಿಗೆ ನಿರ್ಬಂಧ ಹೇರಬಾರದು: ಕೃಷಿ ಸಚಿವ ಬಿ.ಸಿ ಪಾಟೀಲ್.

170

ಚಿಕ್ಕಮಗಳೂರು : ಕೃಷಿ ಚಟುವಟಿಕೆ ಮಾಡುವವರಿಗೆ ನಿರ್ಬಂಧ ಹೇರಬಾರದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಹೇಳಿದ್ದಾರೆ. ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರಿಗೆ ನಗರ ಪ್ರದೇಶಗಳಿಂದ ಹೊಲಗಳಿಗೆ, ತೋಟಕ್ಕೆ ಹೋಗಲು ಅನುಮತಿ ನೀಡಬೇಕು. ಹೊಲ ಗದ್ದೆಗಳಿಗೆ ಹೋಗುವ ರೈತರಿಗೆ ಯಾವುದೇ ತೊಂದರೆ ಆಗಬಾರದು. ಚಿಕ್ಕಮಗಳೂರು ಜಿಲ್ಲೆಗೆ ಬಿತ್ತನೆ ಬೀಜಗಳನ್ನು ನೀಡಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಯಾವ ರೈತರೂ ಕೂಡಾ ಧೈರ್ಯವನ್ನು ಕಳೆದುಕೊಳ್ಳಬಾರದು ಎಂದರು.