ಚಿಕ್ಕಮಗಳೂರು : ಜಿಲ್ಲಾ ಪಂಚಾಯಿತಿಯಲ್ಲಿ ಕೆಟ್ಟು ನಿಂತಿರುವ ಲಿಫ್ಟ್ ನ್ನು ತಕ್ಷಣ ದುರಸ್ತಿ ಪಡಿಸುವಂತೆ ಜಿ.ಪಂ. ಉಪಾಧ್ಯಕ್ಷರಿಗೆ ಹಳೇಹಟ್ಟಿ ಆನಂದನಾಯ್ಕ ಒತ್ತಾಯ…

327

ಚಿಕ್ಕಮಗಳೂರು : ನಗರದ ಜಿಲ್ಲಾ ಪಂಚಾಯಿತಿ ಕಛೇರಿಯಲ್ಲಿ ಕೆಟ್ಟು ನಿಂತಿರುವ ಲಿಫ್ಟ್ ನ್ನು ತಕ್ಷಣ ದುರಸ್ತಿ ಪಡಿಸುವಂತೆ ಕಡೂರು ತಾಲ್ಲೂಕು ಪಂಚಾಯಿತಿ ಸದಸ್ಯ ಹಳೇಹಟ್ಟಿ ಆನಂದನಾಯ್ಕ ಜಿ.ಪಂ. ಉಪಾಧ್ಯಕ್ಷ ಜಿ.ಎನ್.ವಿಜಯಕುಮಾರ್ ಅವರನ್ನು ಒತ್ತಾಯಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಜಿ.ಎನ್.ವಿಜಯಕುಮಾರ್ ಅವರನ್ನು ಸೋಮವಾರ ಭೇಟಿ ಮಾಡಿ ಮನವಿ ಸಲ್ಲಿಸಿದ ಅವರು ಕಳೆದ 3 ವರ್ಷಗಳಿಂದ ಲಿಫ್ಟ್ ಕೆಟ್ಟು ನಿಂತಿರುವುದರಿಂದಾಗಿ ಅದು ಸಾರ್ವಜನಿಕರ ಉಪಯೋಗಕ್ಕೆ ಇದ್ದೂ ಇಲ್ಲದಂತಾಗಿದೆ ಎಂದರು.
ಜಿಲ್ಲಾ ಪಂಚಾಯಿತಿಯಲ್ಲಿ ಇರುವ ಬಹುತೇಕ ಕಛೇರಿಗಳೆಲ್ಲಾ ಮಹಡಿಯ ಮೇಲಿವೆ, ಲಿಫ್ಟ್ ಕೆಟ್ಟು ನಿಂತಿರುವುದರಿಂದಾಗಿ ವೃದ್ದರು, ಮಹಿಳೆಯರು, ಮಕ್ಕಳು ಮತ್ತು ಅಂಗವಿಕಲರು ಮೆಟ್ಟಿಲು ಹತ್ತಿ ಹೋಗಲಾಗದೆ ಪರದಾಡುತ್ತಿದ್ದಾರೆ, ಎಷ್ಟೋ ಜನ ಮೆಟ್ಟಿಲು ಹತ್ತುವ ಅಥವಾ ಇಳಿಯುವ ಭರದಲ್ಲಿ ಬಿದ್ದು ಗಾಯಗೊಂಡಿದ್ದಾರೆ ಎಂದು ದೂರಿದರು.
ಈ ಹಿನ್ನೆಲೆಯಲ್ಲಿ ತಕ್ಷಣ ಲಿಫ್ಟ್‍ನ್ನು ದುರಸ್ತಿಪಡಿಸಬೇಕು ಎಂದು ಆಗ್ರಹಿಸಿದರು, ಮನವಿ ಸ್ವೀಕರಿಸಿದ ಉಪಾಧ್ಯಕ್ಷ ಜಿ.ಎನ್.ವಿಜಯಕುಮಾರ್ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ರಾಜಗೋಪಾಲ್ ಅವರನ್ನು ತಮ್ಮ ಕೊಠಡಿಗೆ ಕರೆದು ಲಿಫ್ಟ್ ಅಳವಡಿಸಿರುವ ಸಂಸ್ಥೆಯಿಂದಲೇ ತಕ್ಷಣ ದುರಸ್ತಿ ಪಡಿಸಬೇಕು ಎಂದು ಸೂಚಿಸಿದರು. ಈ ಸಂದರ್ಭದಲ್ಲಿ ಸೋಮಶೇಖರ್, ಮೋಹನ್‍ಗೌಡ, ಪ್ರಶಾಂತ್ ಹಾಜರಿದ್ದರು.