ಚಿಕ್ಕಮಗಳೂರು : ದಂಡ ಕಟ್ಟಿ ರಶೀದಿ ಕೇಳಿದ ಬೈಕ್ ಸವಾರನಿಗೆ ಟ್ರಾಫಿಕ್ ಪೊಲೀಸ್ ಪೇದೆಯೊಬ್ಬ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಪೊಲೀಸರ ವರ್ತನೆಗೆ ಬೈಕ್ ಸವಾರ ಪ್ರತಿರೋಧ ವ್ಯಕ್ತಪಡಿಸಿದ್ದಕ್ಕೆ ಆತನನ್ನ ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿರೋ ಘಟನೆ ನಗರದಲ್ಲಿ ನಡೆದಿದೆ. ನಿನ್ನೆ ಸಂಜೆ ಬೈಕ್ ಸವಾರನೊಬ್ಬ ಓನ್ ವೇನಲ್ಲಿ ಸಂಚರಿಸ್ತಿದ್ದ. ಆತ ಹೆಲ್ಮೆಟ್ ಕೂಡ ಹಾಕಿದ್ದ, ಡಿಎಲ್, ಗಾಡಿ ಡಾಕ್ಯೂಮೆಂಟ್, ಇನ್ಸುರೆನ್ಸ್ ಎಲ್ಲವೂ ಇತ್ತು. ಓನ್ ವೇ ಎಂದು 500 ದಂಡ ಹಾಕಿದ ಪೇದೆಗೆ ಆತ 500 ಹಣ ಕೂಡನೀಡಿದ್ದಾನೆ. ಬಳಿಕ ಆತ ಆನ್‍ಲೈನ್ ಚೆಕ್ ಮಾಡಿ ಸರ್… ಓನ್ ವೆ ಗೆ 100 ಫೈನ್ ಅಂತ ಇದೆ. ನೀವು 500 ಯಾಕ್ ಹಾಕಿದ್ರಿ ಎಂದು ಪ್ರಶ್ನಿಸಿದ್ದಾನೆ. ಅಲ್ಲಿಗೆ ಪೊಲೀಸ್ ಪೇದೆಯ ಪಿತ್ತ ನೆತ್ತಿಗೇರಿತ್ತು. ಆಮೇಲ್ ಶುರವಾಗಿದ್ದೆಲ್ಲಾ ಪೊಲೀಸ್ ದರ್ಪ ಎಂದು. ತಮಿಳು ಸಿನಿಮಾದ ಸಿಂಗಂಗಳಂತೆ ನುಗ್ಗಿ-ನುಗ್ಗಿ ಹಲ್ಲೆಗೆ ಯತ್ನಿಸಿದ್ದಾರೆ. ಹೊಡೆದಿದ್ದಾರೆ. ಬಳಿಕ ಬೈಕ್ ಸವಾರನೂ ಜೋರಾಗಿ ಮಾತನಾಡಿದ್ದಕ್ಕೆ ಕೊಟ್ಟ ರಶೀದಿಯನ್ನ ಹಿಂಪಡೆದು, ಸ್ಟೇಷನ್‍ಗೆ ಕರೆದೊಯ್ದು ಹೊಡೆದು ಗಾಡಿಯನ್ನ ಸೀಜ್ ಮಾಡಿದ್ದಾರೆ. ಕೋರ್ಟ್‍ನಲ್ಲಿ ದಂಡ ಕಟ್ಟಿ ಗಾಡಿಯನ್ನ ಬಿಡಿಸಿಕೊಳ್ಳುವಂತೆ ಹೇಳಿ ಕಳಿಸಿದ್ದಾರೆ. ಆದ್ರೆ, ರಸ್ತೆ ಮಧ್ಯೆ ಪೊಲೀಸರ ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಸವಾರನ ಮೇಲೆ ಹಲ್ಲೆ ಮಾಡಿದ ಪೇದೆ ಮಂಗಲ್ ದಾಸ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಇನ್ನು ಮೊನ್ನೆ-ಮೊನ್ನೆ ತಾನೇ ಅದೇ ಟ್ರಾಫಿಕ್ ಠಾಣೆಯ ಪೇದೆಯೊರ್ವ ಗಂಡ-ಹೆಂಡತಿ ಮಲಗಿರೋ ವಿಡಿಯೋ ಮಾಡಿ ಸುದ್ದಿಯಾಗಿ, ಸ್ಥಳಿಯರಿಂದ ಗೂಸಾ ತಿಂದು ಆಸ್ಪತ್ರೆ ಸೇರಿದ್ದರು.










