ಚಿಕ್ಕಮಗಳೂರು : ನಕ್ಸಲ್ ನೆಲೆಯನ್ನು ಬೆಳಕಿಗೆ ತಂದ ಹಿರಿಯ ಜೀವಿ ಚೀರಮ್ಮ ನಿಧನ…

436
firstsuddi

ಚಿಕ್ಕಮಗಳೂರು : ಮೆಣಸಿನ ಹಾಡ್ಯದ ಅತ್ಯಂತ ಹಿರಿಯ ಜೀವಿ ಶ್ರೀಮತಿ ಚೀರಮ್ಮ(100) ನಿನ್ನೆ ರಾತ್ರಿ ನಿಧನ ಹೊಂದಿದರು. ಮಲೆನಾಡಿನಲ್ಲಿ 2002 ರಲ್ಲಿ ಮೊಟ್ಟಮೊದಲ ನಕ್ಸಲ್ ಚಟುವಟಿಕೆ ಹೊರ ಜಗತ್ತಿನ ಅರಿವಿಗೆ ಬಂದಿದ್ದು, ಚೀರಮ್ಮನ ಮನೆಯಲ್ಲಿ ಏಕೆ 47 ನಿಂದ ಆಕಸ್ಮಿಕವಾಗಿ ಹೊರ ಬಂದ ಗುಂಡಿನಿಂದ ಚೀರಮ್ಮನವರ ಕಾಲಿಗೆ ಹೊಕ್ಕ ಗುಂಡು ತಣ್ಣಗಿದ್ದ ಮಲೆನಾಡಿನಲ್ಲಿ ಮಾವೋವಾದಿ ಚಟುವಟಿಕೆಯ ಬಗ್ಗೆ ರಾಷ್ಟ್ರದ ಗಮನ ಸೆಳೆಯಿತು. ನಂತರದ ಘಟನೆಗಳು ಇತಿಹಾಸ ಅಂದು ಬರುತ್ತಿದ್ದ ಜನವಾಹಿನಿ ಪತ್ರಿಕೆಯಲ್ಲಿ ಈ ಬಗ್ಗೆ ಮೊದಲ ವರದಿ ಪ್ರಕಟವಾಗಿದ್ದು, ಸರ್ಕಾರದ ಪರವಾಗಿ ಅಂದು ರಾಜ್ಯ ಕಂಡ ಅತ್ಯುತ್ತಮ ಅಧಿಕಾರಿ ಚಿರಂಜೀವಿ ಸಿಂಗ್ ಚೀರಮ್ಮನವರ ಮನೆಗೆ ಬೇಟಿ ನೀಡಿದ್ದರು.

firstsuddi