ಚಿಕ್ಕಮಗಳೂರು : ಪುನೀತ್ ಹಾಗೂ ಯಶ್ ಅಲ್ಲ ಹೀರೋಗಳು, ಸೈನಿಕರು ನಿಜವಾದ ಹೀರೋಗಳು : ಮಹಾದೇವಿ.

702
firstsuddi

ಚಿಕ್ಕಮಗಳೂರು : ಪುನೀತ್ ರಾಜ್‍ಕುಮಾರ್ ಹಾಗೂ ಯಶ್ ನಿಜವಾದ ಹೋರೋಗಳಲ್ಲ. ದೇಶಕ್ಕಾಗಿ ಪ್ರಾಣಕೊಡುವ ಸೈನಿಕರು ನಿಜವಾದ ಹೀರೋಗಳು ಎಂದು ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ್ ಅವರ ಪತ್ನಿ ಮಹಾದೇವಿ ಅವರು ಹೇಳಿದ್ದಾರೆ. ನಗರದ ವಂದೇ ಮಾತರಂ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈಗಿನ ಯುವಕರಿಗೆ ಚಿತ್ರ ನಟರೇ ಹೀರೋಗಳು, ಆದರೆ ಯೋಧರು ತನಗಾಗಿ, ತಮ್ಮ ಮನೆಗಾಗಿ ಅಥವಾ ಬಂಧುಗಳಿಗಾಗಿ ದುಡಿಯುವುದಿಲ್ಲ. ಬದಲಾಗಿ ದೇಶಕ್ಕಾಗಿ ದುಡಿಯುತ್ತಾರೆ. ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಾರೆ. ಹೀಗಾಗಿ ಸೈನಿಕರು ನಿಜವಾದ ಹೀರೋಗಳು. ಚಿತ್ರನಟರು ಕೇವಲ ನಟರಷ್ಟೇ ಹೀರೋಗಳಲ್ಲ. ಈ ಕಾರ್ಯಕ್ರಮಕ್ಕೆ ಯಾರಾದರು ಒಬ್ಬ ಸಿನಿಮಾ ನಟ-ನಟಿಯರು ಆಗಮಿಸಿದ್ದರೆ ನಿಮ್ಮ ಶಿಳ್ಳೆ, ಕೇಕೆಯನ್ನು ಕೇಳುವುದಕ್ಕೆ ಆಗುತ್ತಿರಲಿಲ್ಲ. ಅದೇ ಇಲ್ಲಿಗೆ ಓರ್ವ ಸೈನಿಕ ಬಂದು ಮಾತನಾಡಿದರೆ ನಿಮ್ಮ ಶಿಳ್ಳೆ, ಕೇಕೆ ಯಾವುದು ಕೇಳಿಸುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
2016ರಲ್ಲಿ ಸಿಯಾಚಿನ್‍ನಲ್ಲಿ ಸಂಭವಿಸಿದ ಭಾರಿ ಹಿಮಪಾತದಲ್ಲಿ ಸಿಲುಕಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಕರ್ನಾಟಕದ ವೀರಯೋಧ ಹನುಮಂತಪ್ಪ ಕೊಪ್ಪದ್ ಅವರು 6ದಿನಗಳ ಬಳಿಕ ಜೀವಂತವಾಗಿ ಪತ್ತೆಯಾಗಿದ್ದರು. ಜೀವಂತವಾಗಿ ಪತ್ತೆಯಾಗಿದ್ದರೂ ಕೂಡಾ ಬಹು ಅಂಗಾಗ ವೈಫಲ್ಯದಿಂದ ಹುತಾತ್ಮರಾಗಿದ್ದರು. ಹಿಮಗಡ್ಡೆಗಳ ಮಧ್ಯೆ ಸಿಲುಕಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಯೋಧ ಹನುಮಂತಪ್ಪ ಅವರಿಗೆ ಮರಣೋತ್ತರ ಶೌರ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.