ಚಿಕ್ಕಮಗಳೂರು :ಪ್ರೇಮಿಯಿಂದ ಚಾಕು ಇರಿತಕ್ಕೆ ಒಳಗಾಗಿದ್ದ ಯುವತಿ ಸಾವು…

1706
ಚಿಕ್ಕಮಗಳೂರು:ಭಗ್ನ ಪ್ರೇಮಿಯಿಂದ ಯುವತಿಗೆ ಚಾಕು ಇರಿತ ಪ್ರಕರಣ.ಚಾಕು ಇರಿತಕ್ಕೆ ಒಳಗಾಗಿದ್ದ ಯುವತಿ ಇಂದು ಚಿಕಿತ್ಸೆ ಫಲಕಾರಿಯಾಗದೇ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಯುವತಿ  ಸಾವನ್ನಪ್ಪಿದ್ದು ಬಸಾಪುರ ಗ್ರಾಮದ ಬಿಂದು(23) ಸಾವನಪ್ಪಿದ್ದ ಯುವತಿ  ಎನ್ನಲಾಗಿದ್ದು.
ನಾಲ್ಕು ದಿನದ ಹಿಂದೆ ಇಬ್ಬರು ಮಾಲಗೋಡಿನ ಭದ್ರಾ ತೀರದಲ್ಲಿ ಮಾತನಾಡುತ್ತಾ ಕುಳಿತಿದ್ದ ವೇಳೆ ಪರಸ್ಪರ ಜಗಳ ಮಾಡಿಕೊಂಡ ಜಗಳ ವಿಕೋಪಕ್ಕೆ  ಹೋದ ಪರಿಣಾಮ.ಪ್ರೇಯಸಿ ಬಿಂದುಳನ್ನು ಭದ್ರಾ ನದಿಗೆ ಮಿಥುನ್ ದೂಡಿದ್ದಾನೆ. ಆ ಬಳಿಕ ಮತ್ತೆ ನದಿಯಿಂದ ಎದ್ದು ಬಂದ ಯುವತಿಗೆ ಚಾಕುವಿನಿಂದ  ಮನಸೋ ಇಚ್ಛೆ ಹಲ್ಲೆ ಮಾಡಿದ್ದ  ಮಿಥುನ್ ನೇರವಾಗಿ ಎನ್ಆರ್ ಪುರ  ನ್ಯಾಯಾಧೀಶರ ಮುಂದೆ ಶರಣಾಗಿದ್ದ.ಬಾಳೆಹೊನ್ನೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.