ಚಿಕ್ಕಮಗಳೂರು : ರಾಮನಹಳ್ಳಿ ಬಡಾವಣೆಯ ಶ್ರೀ ಶನೇಶ್ವರಸ್ವಾಮಿ ದೇವಾಲಯದಲ್ಲಿ 19ನೇ ವರ್ಷದ ವಾರ್ಷಿಕ ಉತ್ಸವ…

214
firstsuddi

ಚಿಕ್ಕಮಗಳೂರು : ನಗರದ ರಾಮನಹಳ್ಳಿ ಬಡಾವಣೆಯ ಶ್ರೀ ಶನೇಶ್ವರಸ್ವಾಮಿ ದೇವಾಲಯದಲ್ಲಿ 19ನೇ ವರ್ಷದ ವಾರ್ಷಿಕ ಉತ್ಸವ ಸಹಸ್ರಾರು ಭಕ್ತರ ನಡುವೆ ಶನಿವಾರ ವೈಭವದಿಂದ ನಡೆಯಿತು.
ಉತ್ಸವದ ಪ್ರಯುಕ್ತ ಬೆಳಿಗ್ಗೆ ಶ್ರೀ ಶನೇಶ್ವರ ಸ್ವಾಮಿಗೆ ಅಭಿಷೇಕ, ವಿಶೇಷ ಪೂಜೆ, ಅಲಂಕಾರ, ನವಗ್ರಹ ಹೋಮ, ಗಣಪತಿ ಹೋಮ, ಕಲಾ ಹೋಮ ಮತ್ತು ಶನೇಶ್ವರ ಹೋಮ ಜರುಗಿತು.
ಗಂಗಾ ಪೂಜೆ ನಂತರ ನೂರಾರು ಭಕ್ತರ ನಡುವೆ ಸ್ವಾಮಿಯ ಪಲ್ಲಕ್ಕಿ ಉತ್ಸವವನ್ನು ಗ್ರಾಮದಲ್ಲಿ ನಡೆಸಲಾಯಿತು, ಮಹಾಮಂಗಳಾರತಿ ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ ಜರುಗಿತು, ಮಯೂರಿ ಗಾನ, ಸುಗಮ ಸಂಗೀತ ತಂಡದಿಂದ ಭಕ್ತಿ ಗೀತೆಗಳ ಗಾಯನ ನಡೆಯಿತು.
ಮಧ್ಯಾಹ್ನ ಎ.ಬಿ.ಲೋಕೇಶ್ ಮತ್ತು ತಂಡದಿಂದ ಶ್ರೀ ಶನೇಶ್ವರ ಸ್ವಾಮಿಯವರ ಕಥಾ ಕಾಲಕ್ಷೇಪ ಜರುಗಿತು, ಉತ್ಸವದ ಪ್ರಯುಕ್ತ ನಗರ ಮತ್ತು ಸುತ್ತಮುತ್ತಲ ಗ್ರಾಮಗಳ ಸಹಸ್ರಾರು ಭಕ್ತರು ಬೆಳಗಿನಿಂದ ರಾತ್ರಿಯವರೆಗೆ ದೇವಾಲಯಕ್ಕೆ ತೆರಳಿ ಪೂಜೆ, ಪ್ರಾರ್ಥನೆ ಸಲ್ಲಿಸಿದರು.