ಚಿಕ್ಕಮಗಳೂರು : ಲಾಕ್‍ ಡೌನ್ ಹಿನ್ನೆಲೆ ಮಂಗಳಮುಖಿಯರ ನೆರವಿಗೆ ಮುಂದಾದ ವರ್ತಕರ ಸಂಘ…

229
firstsuddi

ಚಿಕ್ಕಮಗಳೂರು : ಲಾಕ್‍ ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಮಂಗಳಮುಖಿಯರ ನೆರವಿಗೆ ನಗರ ವರ್ತಕರ ಸಂಘದ ಪದಾಧಿಕಾರಿಗಳು ಇಂದು ಮುಂದಾದರು.

ಬೆಳಗ್ಗೆ ಆಪೆ ವಾಹನದಲ್ಲಿ ಪಡಿತರ ಕಿಟ್ ಗಳೊಂದಿಗೆ ಮಂಗಳಮುಖಿಯರ ಮನೆಗಳಿಗೆ ತೆರಳಿದ ಪದಾಧಿಕಾರಿಗಳು ಅಕ್ಕಿ, ಬೇಳೆ, ಸಕ್ಕರೆ, ಕಾಫಿಪುಡಿ, ಎಣ್ಣೆ ಸೇರಿದಂತೆ 17 ದಿನಬಳಕೆ ಸಾಮಾಗ್ರಿಗಳನ್ನು ವಿತರಿಸಿದರು.

ನಂತರ ನಗರದಲ್ಲಿ ಬಂದೋಬಸ್ತ್ ಕೈಗೊಂಡಿದ್ದ ಪೊಲೀಸರಿಗೆ ಸಿಹಿ ಮತ್ತು ಕುಡಿಯುವ ನೀರನ್ನು ನೀಡಿದರು. ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಟಿ.ಎಸ್.ಚಂದ್ರಶೇಖರ್ ದಾನಿಗಳ ನೆರವಿನೊಂದಿಗೆ ಈ ಸೇವಾ ಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ತಾಲ್ಲೂಕಿನ ಆರ್ಜಿಹಳ್ಳಿಯ ಕೊರೊನಾ ಸೋಂಕಿತರ ಕುಟುಂಬಗಳಿಗೂ ಸಧ್ಯದಲ್ಲೇ ಪಡಿತರ ಕಿಟ್‍ಗಳನ್ನು ವಿತರಿಸಲಾಗುವುದು ಎಂದು ಹೇಳಿದರು.

ನಗರ ವರ್ತಕರ ಸಂಘದ ಉಪಾಧ್ಯಕ್ಷ ಕೆ.ಎಸ್.ನಾಗೇಶ್, ಕಾರ್ಯದರ್ಶಿ ತನೋಜ್‍ ಕುಮಾರ್, ಖಜಾಂಚಿ ಸತೀಶ್‍ಗೌಡ, ಸಹ ಕಾರ್ಯದರ್ಶಿ ಸಿ.ಆರ್.ರಮೇಶ್, ಶಿವಪ್ರಕಾಶ್, ಜೆ.ವಿನಾಯಕ, ಕುಮಾರ್, ನಾಗರಾಜ್ ಹಾಜರಿದ್ದರು.