ಯುಪಿಎಸ್ ಸಿ ಪ್ರಿಲಿಮಿನರಿ ಪರೀಕ್ಷೆ ಮುಂದೂಡಿಕೆ…

89
firstsuddi

ನವದೆಹಲಿ : ದೇಶದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಯುಪಿಎಸ್ ಸಿ ನಾಗರಿಕ ಸೇವಾ ಪರೀಕ್ಷೆಯನ್ನು ಕೇಂದ್ರ ಲೋಕಸೇವಾ ಆಯೋಗ ಮುಂದೂಡಿದೆ.

ಜೂನ್ 27 ರಂದು ನಿಗದಿಯಾಗಿದ್ದ ಯುಪಿಎಸ್ ಸಿ ಪ್ರಿಲಿಮಿನರಿ ಪರೀಕ್ಷೆಯನ್ನು ಅಕ್ಟೋಬರ್ 10 ರಂದು ನಡೆಸುವುದಾಗಿ ಆಯೋಗ ತಿಳಿಸಿದೆ.

ಕೊರೊನಾ ಲಾಕ್ ಡೌನ್ ನಿಂದಾಗಿ ಕಳೆದ ವರ್ಷವು ಕೂಡ ಮೇ ತಿಂಗಳಲ್ಲಿ ನಡೆಯಬೇಕಾಗಿದ್ದ ಯುಪಿಎಸ್ ಸಿ ನಾಗರಿಕ ಸೇವಾ  ಪರೀಕ್ಷೆ ಅಕ್ಟೋಬರ್ 4ರಂದು ನಡೆದಿತ್ತು.