ಚಿಕ್ಕಮಗಳೂರು : ಶಕ್ತಿ ಮದ್ಯವ್ಯಸನ ಮುಕ್ತಿ ಕೇಂದ್ರದಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನ ಆಚರಣೆ…

184
firstsuddi

ಚಿಕ್ಕಮಗಳೂರು : ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆಯನ್ನು ನಗರದ ಬೈಪಾಸ್ ರಸ್ತೆಯ ಶಕ್ತಿ ಮದ್ಯವ್ಯಸನ ಮುಕ್ತಿ ಕೇಂದ್ರದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಸಿದ್ದಪ್ಪ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕಾಗಿ ತಂಬಾಕು, ಡ್ರಗ್ಸ್ ಮತ್ತು ಮದ್ಯಸೇವನೆಯಿಂದ ದೂರವಿರುವಂತೆ ಸಲಹೆ ಮಾಡಿದರು.
ತಂಬಾಕು, ಡ್ರಗ್ಸ್ ಮತ್ತು ಮದ್ಯ ಸೇವನೆಯಿಂದ ಮೆದುಳಿನ ಕ್ರಿಯೆಗಳು ನಿಷ್ಕ್ರಿಯವಾಗುತ್ತವೆ, ಲಿವರ್, ಹೃದಯ ಮತ್ತು ಮೆದುಳಿನ ಜೀವಕೋಶಗಳು ಕುಗ್ಗುವುದರ ಮೂಲಕ ಮಾನಸಿಕ ಖಿನ್ನತೆ ಆವರಿಸುತ್ತದೆ ಎಂದು ಎಚ್ಚರಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ವ್ಯಸನಮುಕ್ತಿ ಕೇಂದ್ರದ ವ್ಯವಸ್ಥಾಪಕ ಹೆಚ್.ಮಂಜುನಾಥ್ ತಂಬಾಕು, ಡ್ರಗ್ಸ್ ಮತ್ತು ಮದ್ಯ ಸೇವಿಸುವವರು ಅದು ಚಟವಾಗುವುದಕ್ಕಿಂತ ಮುಂಚೆಯೇ ಎಚ್ಚೆತ್ತುಕೊಂಡು ವ್ಯಸನ ಮುಕ್ತರಾಗಬೇಕು ಎಂದು ಕಿವಿಮಾತು ಹೇಳಿದರು.
ತಂಬಾಕು, ಡ್ರಗ್ಸ್ ಮತ್ತು ಮದ್ಯ ಸೇವನೆಯಿಂದ ದೂರ ಉಳಿಯುವ ಕುರಿತು ಸಾರ್ವಜನಿಕರಿಗೆ ಸಮಾರಂಭದಲ್ಲಿ ಪ್ರತಿಜ್ಞಾವಿಧಿ ಬೋಧಿಸಲಾಯಿತು, ಮಹೇಂದ್ರಪ್ಪ, ಹೆಚ್.ಆರ್.ಸೌರಭ, ಸಂದೀಪ್ ಕುಮಾರ್ ಉಪಸ್ಥಿತರಿದ್ದರು.