ಚಿಕ್ಕಮಗಳೂರು : ತಾಲ್ಲೂಕಿನ ಕದ್ರಿಮಿದ್ರಿ ಗ್ರಾಮದ ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ವ್ಯಕ್ತಿಯೋರ್ವರು ನಿರ್ಮಿಸಿರುವ ಶೆಡ್ ಮತ್ತು ಇಟ್ಟಿಗೆ ಗೂಡನ್ನು ತೆರವುಗೊಳಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಜಿಲ್ಲಾಧಿಕಾರಿ ಕಛೇರಿಯ ಶಿರಸ್ತೇಧಾರ್ ಮನು ಅವರನ್ನು ಭೇಟಿ ಮಾಡಿದ ಸಮಿತಿಯ ಪದಾಧಿಕಾರಿಗಳು ಹಾಗೂ ಕದ್ರಿಮಿದ್ರಿ ಗ್ರಾಮಸ್ಥರು ಈ ಸಂಬಂಧ ಮನವಿ ಸಲ್ಲಿಸಿದರು.
ಕದ್ರಿಬಿದ್ರಿ ಗ್ರಾಮದ ಸರ್ವೆ ನಂ. 273ರ ಸರ್ಕಾರಿ ಜಾಗದಲ್ಲಿ ಅದೇ ಗ್ರಾಮದ ವ್ಯಕ್ತಿಯೋರ್ವರು ಅನಧಿಕೃತವಾಗಿ ಶೆಡ್ ಹಾಗೂ ಇಟ್ಟಿಗೆ ಗೂಡನ್ನು ನಿರ್ಮಿಸಿ ಕೊಂಡು ಇಟ್ಟಿಗೆ ವ್ಯಾಪಾರ ಮಾಡುತ್ತಿದ್ದಾರೆ ಈ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ದೂರು ನೀಡಲಾಗಿದ್ದು, ಆ ಇಲಾಖೆ ಅಕ್ರಮ ಶೆಡ್ ನಿರ್ಮಾಣಕ್ಕಾಗಿ 50 ಸಾವಿರ ರೂ ದಂಡ ವಿಧಿಸಿದೆ ಎಂದು ತಿಳಿಸಿದರು.
ಅಕ್ರಮ ಶೆಡ್ ತೆರವುಗೊಳಿಸುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಅಧಿಕಾರಿಗಳು ಕ್ರಮ ಕೈಗೊಳ್ಳದೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ದೂರಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ, ಸಂಚಾಲಕ ಕೆ.ಪಿ.ರಾಜರತ್ನಂ, ಖಜಾಂಚಿ ಆರ್.ಶೇಖರ್, ಕದ್ರಿಮಿದ್ರಿ ಗ್ರಾಮಸ್ಥರಾದ ಸ್ವಾಮಿ, ಕೃಷ್ಣಪ್ಪ, ಶಾಂತಕುಮಾರ್, ಧರ್ಮೇಶ್, ಶಿವಣ್ಣ ಹಾಜರಿದ್ದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಶೆಡ್ ಮತ್ತು ಇಟ್ಟಿಗೆ ಗೂಡನ್ನು ತೆರವುಗೊಳಿಸುವಂತೆ ಜಿಲ್ಲಾಡಳಿತಕ್ಕೆ...










